ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ತಂಬಾಕು ನಿಯಂತ್ರಣ : ಪಾನ್ ಶಾಪ್,ಕಿರಾಣಿ ಸ್ಟೋರ್ ಗಳ ಮೇಲೆ ದಾಳಿ

ಕಲಘಟಗಿ : ಪಟ್ಟಣದಲ್ಲಿಂದು ಜಿಲ್ಲಾಪಂಚಾಯಿತಿ ಹಾಗೂ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ತಂಬಾಕು ನಿಯಂತ್ರಣಾಧಿಕಾರಿಗಳು ಪಟ್ಟಣದ ಸ್ವೀಟ್ ಮಾರ್ಟ್,ಪಾನ್ ಶಾಪ್,ವೈನ್ ಶಾಪ್,ಕಿರಾಣಿ ಸ್ಟೋರಿ ಹಾಗೂ ಪ್ರಮುಖ ಫುಡ್ ಎಜೆನ್ಸಿ ಮೇಲೆ ದಾಳಿ ನಡೆಸಿ ಗುಟ್ಕಾ,ಸಿಗರೇಟ್ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ತಂಬಾಕು ನಿಯಂತ್ರಣ ಸಂಯೋಜಕ ನವೀನ ಕಲ್ಲಪ್ಪನ್ನವರ,ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮವಾಗಿ ತಂಬಾಕು ಮಾರಾಟ ಮಾಡುವವರಿಗೆ ದಂಡ ವಿಧಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದೆ ಎಂದು ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ತಂಬಾಕು ನಿಯಂತ್ರಣ ಕುರಿತು ಜನರಿಗೆ ಹಾಗೂ ಅಂಗಡಿದಾರರಿಗೆ ತಿಳಿ ಹೇಳಿದ್ದಾರೆ. ಇನ್ನು ಅಧಿಕಾರಿಗಳ ಜೊತೆ ಸ್ಥಳೀಯ ಪೊಲೀಸರು ಸಾಥ್ ನೀಡಿದರು.

Edited By : Nagesh Gaonkar
Kshetra Samachara

Kshetra Samachara

11/01/2022 04:50 pm

Cinque Terre

22.5 K

Cinque Terre

5

ಸಂಬಂಧಿತ ಸುದ್ದಿ