ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣದ ಆಸೆಗೆ ಕುರುಡ ಸ್ನೇಹಿತನ‌ ಕೊಲೆ ಪ್ರಕರಣ ಸಾಬೀತು: ಆರೋಪಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಹಣದ ಆಸೆಗಾಗಿ ಹುಟ್ಟು ಕುರುಡನನ್ನು ಸ್ನೇಹಿತನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜಗದೀಶ ಪರಮೇಶ್ವರ ಶಿರಗುಪ್ಪಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಆದೇಶ ನೀಡಿದೆ. 2015 ಮೇ 22 ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ಶಿಕ್ಷೆ ನೀಡಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿರಾದಾರ ದೇವೆಂದ್ರಪ್ಪ ಎನ್ ಅವರಿಂದ ಆದೇಶ ನೀಡಲಾಗಿದೆ.

ಸರಕಾರಿ ಅಭಿಯೋಜಕರಾದ ಗಿರಿಜಾ ತಮ್ಮಿನಾಳ ಕೊಲೆಯಾದವರ ಪರ ವಾದ ಮಂಡಿಸಿದ್ದರು.

ಏನಿದು ಪ್ರಕರಣ: ಮೃತನಾದ ಜಗದೀಶ್ ಶಿರಗುಪ್ಪಿ ಹುಟ್ಟು ಕುರುಡನಾಗಿದ್ದು, ಇತನಿಗೆ ದುಡಿಮೆ ಮಾಡುವ ಕೆಲಸಕ್ಕೆ ಅರಿಯರ್ಸ ಆಗಿ 1.50 ಲಕ್ಷ ರೂ ಬಂದಿದ್ದು, ಅದನ್ನು ತನ್ನ ಸ್ನೇಹಿತನಿಗೆ ಕೊಡಬೇಕು ಎಂಬ ಕಾರಣದಿಂದ ಆರೋಪಿ ಬಸವರಾಜ ಜಿಗಳೂರುನನ್ನು ಜೊತೆಗೆ ಕರೆದುಕೊಂಡು ಗದುಗಿನ ಕಾರ್ಪೋರೇಷನ್ ಬ್ಯಾಂಕ್ ಹೋಗಿ ಹಣವನ್ನು ಡ್ರಾ ಮಾಡಿ ಹುಬ್ಬಳ್ಳಿಗೆ ಬಂದಿದ್ದಾರೆ. ಆಗ ಹಣದ ಆಸೆಗೆ ಬಸವರಾಜ ಜಿಗಳೂರು ಜಗದೀಶ್ ಶಿರಗುಪ್ಪಿ ಅವರನ್ನು ಉಣಕಲ್ ಸಿದ್ದಪ್ಪಜ್ಜನ ಗುಡಿಯ ಹಿಂಭಾಗದಲ್ಲಿ ಉಣಕಲ್ ಕೆರೆಯ ಕೊಡಿಯ ಹತ್ತಿರ ಕರೆದುಕೊಂಡು ಹೋಗಿ 2015 ಮೇ.23 ರಾತ್ರಿ 8 ರಿಂದ 8.30 ರ ಅವಧಿಯಲ್ಲಿ ಮಚ್ಚಿನಿಂದ ಸಕ್ಕಸಿಕ್ಕಲಿ ಹೊಡೆದು ಕೊಲೆ ಮಾಡಿ ಆತನ ಬಳಿಯಿದ್ದ 1.40 ಲಕ್ಷ ರೂ ಗಳನ್ನು ದೋಚಿಕೊಂಡು ಹೋಗಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿತ ಮೇಲೆ ದೋಷಾರೋಪನೆ ಪಟ್ಟಿ ಸಲ್ಲಿಸಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ ಜಿಗಳೂರು ಮಾಡಿದ ಕೊಲೆ ಪ್ರಕರಣ ಸಾಬೀತಾಗಿದ್ದು ಆರೋಪಿಗೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿದೆ.

Edited By : Nirmala Aralikatti
Kshetra Samachara

Kshetra Samachara

29/11/2021 02:02 pm

Cinque Terre

23.42 K

Cinque Terre

2

ಸಂಬಂಧಿತ ಸುದ್ದಿ