ಧಾರವಾಡ: ಅಕ್ಟೋಬರ್ 30ರಂದು ಮೆಗಾ ಲೋಕ್ ಅದಾಲತ್ ಅನ್ನು ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು. ಲೋಕ್ ಅದಾಲತ್‍ನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹಾಗೂ ಅಧ್ಯಕ್ಷ ಉಮೇಶ್ ಎಂ. ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 12 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 16 ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 02 ಪೀಠವನ್ನು ಒಟ್ಟು 34 ಪೀಠಗಳನ್ನು ಸ್ಥಾಪಿಸಲಾಗಿತ್ತು.
ವಿವಿಧ ರೀತಿಯ ಸುಮಾರು 12,061 ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 6134 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 86 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಯಿತು. ಸುಮಾರು 24 ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಯಿತು.
ಸದರಿ ಲೋಕ್ ಅದಾಲತ್‍ನಲ್ಲಿ ಧಾರವಾಡ ಜಿಲ್ಲೆಯ ಗೌರವಾನ್ವಿತ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪೆನಿಯ ಅಧಿಕಾರಿಗಳು, ವಿಮೆ ಕಂಪೆನಿಯ ಪ್ಯಾನಲ್ ವಕೀಲರುಗಳು, ಎನ್.ಡಬ್ಲು.ಕೆ.ಆರ್.ಟಿ.ಸಿ. ಅಧಿಕಾರಿಗಳು, ಅರ್ಜಿದಾರರ ಪರ ವಕೀಲರುಗಳು, ಕಕ್ಷಿದಾರರು ಭಾಗವಹಿಸಿ ಈ ಮೆಗಾ ಲೋಕ್ ಅದಾಲತ್‍ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪುಷ್ಪಲತ ಸಿ.ಎಮ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
30/09/2021 07:58 pm