ಧಾರವಾಡ: ಧಾರವಾಡದ ಹೈಕೋರ್ಟ್ ಪೀಠದಲ್ಲಿ ಇಂದು ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರ ಮಾರ್ಗದರ್ಶನದಲ್ಲಿ ಮೆಗಾ ಲೋಕ ಅದಾಲತ್ ಜರುಗಿತು. ಹಿರಿಯ ನ್ಯಾಯಮೂರ್ತಿಗಳೊಂದಿಗೆ, ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ್, ಹಂಚಾಟೆ ಸಂಜೀವಕುಮಾರ್, ಪಿ.ಎನ್.ದೇಸಾಯಿ, ಎಮ್.ಜಿ.ಎಸ್.ಕಮಲ್, ರಾಜೇಂದ್ರ ಬಾದಾಮಿಕರ್ ಹಾಗೂ ಲೋಕ ಅದಾಲತ್‌ನ ಸದಸ್ಯರುಗಳಾದ ಎಸ್.ಎಸ್.ಬಡವಡಗಿ, ಕೆ.ಎಲ್.ಪಾಟೀಲ್, ಎಂ.ಎಂ. ಕನ್ನೂರು, ಎಂ.ಎಚ್.ಪಾಟೀಲ, ಎಂ.ಸಿ.ಹುಕ್ಕೇರಿ ಮತ್ತು ಜೆ.ಎಸ್.ಶೆಟ್ಟಿ ಅವರನ್ನೊಳಗೊಂಡ ಒಟ್ಟು 6 ಪೀಠಗಳಲ್ಲಿ ಲೋಕ ಅದಾಲತ್ ಜರುಗಿತು.
ಒಟ್ಟು 1564 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 432 ಪ್ರಕರಣಗಳನ್ನು 8,34,32,909 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ನ್ಯಾಯಾಂಗ ಅಧಿಕ ವಿಲೇಖನಾಧಿಕಾರಿಗಳು ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಜೈಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
14/08/2021 05:03 pm