ಕುಂದಗೋಳ : ಕಳೆದ ಮೂರು ವರ್ಷದ ಹಿಂದೆ 2017 ರಲ್ಲಿ ಗುಡಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಗುಂಜಳ ಗ್ರಾಮದಲ್ಲಿ ನಡೆದ ಕುದುರೆ ಜಾತ್ರಾ ಮಹೋತ್ಸವದಲ್ಲಿ ಬಂದೂಬಸ್ತ್ ಗೆ ತೆರಳಿದ್ದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಜೊತೆ ತಂಟೆಗಿಳಿದು ಹಲ್ಲೇ ನಡೆಸಿದ್ದ ಮೂವರು ಆರೋಪಿಗಳ ಪ್ರಕರಣವನ್ನು ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಅಧೀನ ನ್ಯಾಯಾಲಯವು ಫೆ.26 ರಂದು ತೀರ್ಪು ಪ್ರಕಟಿಸಿದೆ.
ಮೂವರು ಆರೋಪಿಗಳಿಗೆ ತಲಾ 1 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 16 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಟ್ಟಾರೆ ಸತತ ಮೂರು ವರ್ಷದ ಬಳಿಕ ಕರ್ತವ್ಯ ನಿರತ ಪೊಲೀಸರ ಹಲ್ಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ದೊರೆತಂತಾಗಿದೆ.
Kshetra Samachara
01/03/2021 03:22 pm