ಕುಂದಗೋಳ : ಇತ್ತಿಚೆಗೆ ಹೊಸಪೇಟೆಯಲ್ಲಿ ನಡೆದಂತಹ ವಕೀಲ ವೆಂಕಟೇಶ್ ಅವರ ಹತ್ಯೆ ಖಂಡಿಸಿ ಕುಂದಗೋಳ ವಕೀಲ ಸಂಘ ಹಾಗೂ ಪದಾಧಿಕಾರಿಗಳು ತಹಶೀಲ್ದಾರ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಶಿರಸ್ತೇದಾರ್ ಮಹೇಶ್ ಶಾನಭಾಗ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ವಕೀಲ ಸಂಘದ ತಾಲೂಕು ಅಧ್ಯಕ್ಷ ಜಿ.ಬಿ.ಸೊರೊಟೂರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಕೀಲರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೊಂದವರಿಗೆ ನ್ಯಾಯ ದೊರಕಿಸುವ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಇಂತಹ ವಕೀಲರಿಗೆ ಇಂದಿನ ದಿನದಲ್ಲಿ ರಕ್ಷಣೆ ಇಲ್ಲವಾದರೆ ನ್ಯಾಯವನ್ನು ರಕ್ಷಣೆ ಮಾಡುವುದು ಹೇಗೆ ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿ 1990 ಜುಲೈ 10 ರಂದು ಅಡ್ವೊಕೇಟ್ ಪ್ರೋಟೆಕ್ಷನ್ ಆಕ್ಟ್'ಗೆ ಸುಪ್ರೀಂ ಕೋರ್ಟ್ ಅನುಮೋದನೆ ದೊರೆತಿದ್ದರು ಆ ಕಾಯ್ದೆಯನ್ನು ಇಂದಿಗೂ ಜಾರಿಗೆ ತಂದಿಲ್ಲ. ಶೀಘ್ರ ಆ ಕಾಯ್ದೆ ಜಾರಿಗೊಳಿಸಿ ವಕೀಲರಿಗೆ ರಕ್ಷಣೆ ನೀಡುವಂತೆ ಘೋಷಣೆ ಕೂಗಿದರು.
ಹೊಸಪೇಟೆ ವಕೀಲರ ಮೇಲೆ ಹಲ್ಲೇ ನಡೆಸಿದ ಆರೋಪಿಗೆ ಜೀವಾವಧಿ ಶಿಕ್ಷೆ ಇಲ್ಲವೇ ಮರಣದಂಡನೆ ನೀಡುವಂತೆ ಆಗ್ರಹಿಸಿದರು.
Kshetra Samachara
01/03/2021 02:51 pm