ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಟ್ಕಾ ಸಿಗರೇಟ್ ಬಿಡಿ ವ್ಯಾಪಾರಕ್ಕೆ ದಂಡ, ಮಾರಾಟಕ್ಕೆ ಬ್ರೇಕ್

ಕುಂದಗೋಳ : ಗುಟ್ಕಾ ಮತ್ತು ಸಿಗರೇಟ್ ಉತ್ಪನ್ನಗಳ ಬಿಡಿ ವ್ಯಾಪಾರ ಮಾಡುತ್ತಿದ್ದ ಕಿರಾಣಿ ಹಾಗೂ ಪಾನ್ ಶಾಪ್ ಅಂಗಡಿಗಳ ಮೇಲೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಪಿಐ ಬಸವರಾಜ ಕಲ್ಲಮ್ಮನವರ ನೇತೃತ್ವದಲ್ಲಿ ದಾಳಿ ನಡೆಸಿ ಚಿಲ್ಲರೆ ವ್ಯಾಪಾರ ನಡೆಸಿದ್ದ ಗುಟ್ಕಾ ಹಾಗೂ ಸಿಗರೇಟ್ ಪ್ಯಾಕೆಟ್ ವಶಪಡಿಸಿಕೊಂಡು ದಂಡ ವಿಧಿಸಿದರು.

ಕುಂದಗೋಳ ಪಟ್ಟಣದಲ್ಲಿ ಪರವಾನಗಿಯನ್ನು ಪಡೆದ ಹೋಲಸೆಲ್ ಮಾರಾಟ ಮಳಿಗೆಗಳಿಗೆ ಮಾತ್ರ ಗುಟ್ಕಾ ಸಿಗರೇಟ್ ಪ್ಯಾಕೆಟ್ ಮಾರಲು ಅವಕಾಶವಿದೆ. ಕಿರಾಣಿ ಅಂಗಡಿ ಹಾಗೂ ಪಾನ್ ಶಾಪ್'ಗಳಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಅವಕಾಶವಿಲ್ಲ ಮತ್ತೋಮ್ಮೆ ಪ್ರಕರಣ ಕಂಡರೆ ಶಿಕ್ಷೆ ಖಚಿತ ಎಂದು ಸಿಪಿಐ ಬಸವರಾಜ ಕಲ್ಲಮ್ಮನವರ ಹೇಳಿದರು.

ಬಳಿಕ ಪಟ್ಟಣದ ಬಾರ್ ಒಂದರಲ್ಲಿ ಧೂಮಪಾನ ನಿಷೇಧದ ನಾಮ ಫಲಕ ಅಳವಡಿಸದ ಕಾರಣ ಬಾರ್ ಮಾಲೀಕರಿಗೆ ದಂಡ ವಿಧಿಸಿದರು. ಗುಟ್ಕಾ ಸಿಗರೇಟ್ ಬಿಡಿ ಉತ್ಪನ್ನಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

26/02/2021 01:46 pm

Cinque Terre

12.81 K

Cinque Terre

4

ಸಂಬಂಧಿತ ಸುದ್ದಿ