ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟೋಯಿಂಗ್ ವಾಹನ ಸಿಬ್ಬಂದಿಗಳ ದಬ್ಬಾಳಿಕೆ: ಗಾಯಗೊಂಡ ಬೈಕ್ ಚಾಲಕ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿ ವಾಹನ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.ನಗರದಲ್ಲಿ ಪಾರ್ಕಿಂಗ್ ಜಾಗೆಯನ್ನು ಗುರತಿಸದೇ ಇದ್ದರೂ ನೋ ಪಾರ್ಕಿಂಗ್ ಹೆಸರಲ್ಲಿ ವಾಹನಗಳನ್ನು ಟೋಯಿಂಗ್ ಮಾಡಿಕೊಂಡು ಹೋಗುತ್ತಿದ್ದಾರೆ.ಇದನ್ನು ಪ್ರಶ್ನಿಸಿದ ಚಾಲಕನ ಮೇಲೆ ದಬ್ಬಾಳಿಕೆ ನಡೆಸಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಲ್ಯಾಮಿಂಗ್ಟನ್ ಶಾಲೆಯ ಎದುರು ವ್ಯಕ್ತಿಯೊಬ್ಬರು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಬೆಂಗಳೂರಿನಿಂದ ಬಂದ ಸ್ನೇಹಿತರಿಗೆ ಸ್ವೀಟ್ ತರಲು ಹೋದ ಸಂದರ್ಭದಲ್ಲಿ ಟೋಯಿಂಗ್ ವಾಹನ ಸಿಬ್ಬಂದಿ ಯಾವುದೇ ರೀತಿ ಸೂಚನೆ ನೀಡದೇ ಏಕಾಏಕಿ ಬೈಕ್ ಅನ್ನು ಟೋಯಿಂಗ್ ಮಾಡಿದ್ದಾರೆ.ಇದೇ ವೇಳೆಯಲ್ಲಿ ಬೈಕ್ ಚಾಲಕ ದಡಬಡಾಯಿಸಿ ಬಂದು ಪುಟ್ ಪಾತ್ ನ ತಗ್ಗಿನಲ್ಲಿ ಮುಗ್ಗರಿಸಿ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಅಲ್ಲಿದ್ದ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ವಾಣಿಜ್ಯನಗರಿಯಲ್ಲಿ ಟೋಯಿಂಗ್ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ಮಾಡಲಾಗುತ್ತಿದೆ.ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿ ದಂಡ ಹಾಕಬೇಕು.ಆದರೇ ಪೊಲೀಸರು ಹಾಗೂ ಮಹಾನಗರ ಪಾಲಿಕೆ ದಂಡ ವಸೂಲಿಗೆ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

06/02/2021 07:47 pm

Cinque Terre

38.48 K

Cinque Terre

20

ಸಂಬಂಧಿತ ಸುದ್ದಿ