ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಟ್ಟಿಗಟ್ಟಿ ರಸ್ತೆ ಅಪಘಾತದ ವರದಿ ಕೋರಿದ ಸುಪ್ರೀಂ- ಫೆ.15 ಗಡುವು

ಹುಬ್ಬಳ್ಳಿ: ಮನುಕುಲವನ್ನೇ ಬೆಚ್ಚಿ ಬಿಳಿಸಿದ ಧಾರವಾಡ ಸಮೀಪದ ಇಟ್ಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದ ಕುರಿತು ಸುಪ್ರೀಂ ಕೋರ್ಟ್ ವರದಿ ಕೇಳಿದೆ.

ಹೌದು. ಕೆಲ ದಿನದ ಹಿಂದಷ್ಟೇ ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸುಮಾರು 13 ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ಸಮಿತಿ ಅಪಘಾತದ ಕುರಿತು ವರದಿಯನ್ನು ಕೇಳಿದೆ. ಜೊತೆಗೆ ವರದಿ ನೀಡಲು ಫೆಬ್ರವರಿ 15ರವರೆಗೆ ಗಡುವು ನೀಡಿದೆ.

ಈ ಕುರಿತು ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿ ಟ್ರಾನ್ಸ್‌ಪೋರ್ಟ್ ಡಿಪಾರ್ಟ್ಮೆಂಟ್ ಅವರಿಗೆ ನೋಟಿಸ್ ನೀಡಿದೆ. ಘಟನಾ ಸ್ಥಳದಿಂದ 32 ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಸಂಭವಿಸಿ ಅಪಘಾತಗಳ ಪ್ರಮಾಣವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈಗ ವರದಿ ನೀಡುವಂತೆ ಕೋರಿದೆ.

Edited By : Vijay Kumar
Kshetra Samachara

Kshetra Samachara

24/01/2021 02:13 pm

Cinque Terre

68.96 K

Cinque Terre

29

ಸಂಬಂಧಿತ ಸುದ್ದಿ