ಹುಬ್ಬಳ್ಳಿ: ಸಂಕ್ರಾಂತಿ ಹಬ್ಬದ ನಡುವೆಯೂ ಹು- ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಸಿಟಿ ರೌಂಡ್ಸ್ ಹಾಕಿದ್ದಾರೆ. ನಗರದ ಪ್ರಮುಖ ರಸ್ತೆಗಳು ಹಾಗೂ ಇಕ್ಕಟ್ಟಾದ ಸರ್ಕಲ್ ಗಳ ಪರಿಶೀಲನೆ ನಡೆಸಿದರು.
ದೇಶಪಾಂಡೆ ನಗರ, ಹೊಸೂರು ಸರ್ಕಲ್ ಸೇರಿದಂತೆ ಹೆಚ್ಚು ವಾಹನ ದಟ್ಟಣೆ ಇರುವಂತ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸರ್ಕಲ್ ಗಳ ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಟ್ರಾಫಿಕ್ ನಿಯಂತ್ರಣಕ್ಕಾಗಿ ರಸ್ತೆಗಳ ಅಗಲೀಕರಣ ಹಾಗೂ ಒನ್ ವೇ ಹಾಗೂ ತಿರುವುಗಳ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತ ಲಾಬುರಾಮ್ ಸಮಾಲೋಚನೆ ನಡೆಸಿದರು.
Kshetra Samachara
14/01/2021 11:23 am