ಧಾರವಾಡ: ರೂಪಾಂತರ ಕೊರೊನಾ ವೈರಸ್ ತ್ವರಿತಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಡಳಿತ ಕೆಲವೊಂದಿಷ್ಟು ನಿಯಮಾವಳಿಗಳನ್ನು ಮಾಡಿದ್ದು, ನಿಯಮ ಉಲ್ಲಂಘಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬು ರಾಮ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿನಗರದ ದೊಡ್ಡ ದೊಡ್ಡ ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಹೆಚ್ಚು ಜನ ಸೇರಿಸದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಯಾರಾದರೂ ಸೂಚನೆ ಉಲ್ಲಂಘಿಸಿದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಬಚ್ಛಾಖಾನ್ ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಯಾರಾದರೂ ಉದ್ಯಮಿಗಳು ತಮಗೆ ಬಂದಿರುವ ಬೆದರಿಕೆ ಕುರಿತು ದೂರು ನೀಡಿದರೆ, ಅವರಿಗೂ ರಕ್ಷಣೆ ನೀಡಲಾಗುವುದು ಎಂದರು.
Kshetra Samachara
30/12/2020 11:42 am