ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೂಕ ಮತ್ತು ಅಳತೆ ಸತ್ಯಾಪನೆ ಶುಲ್ಕ ಸಂಗ್ರಹ: ಇಲಾಖೆಯ ಸ್ಪಷ್ಟೀಕರಣ

ಹುಬ್ಬಳ್ಳಿ : ಕಾನೂನು ಮಾಪನಶಾಸ್ತ್ರ ಇಲಾಖಾ ಅಧಿಕಾರಿಗಳು ಸರ್ಕಾರಿ ಶುಲ್ಕ ಹಾಗೂ ಖಾಸಗಿ ಏಜೆಂಟರ್ ಶುಲ್ಕವೆಂಬ ಎರಡು ಬಗೆಯ ಶುಲ್ಕವನ್ನು ಪಡೆಯುತ್ತಿದೆ ಎಪಿಎಂಸಿ ವರ್ತಕರ ಸಂಘವು ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ ಕಾನೂನು ಮಾಪನಶಾಸ್ತ್ರ ಇಲಾಖೆಯು ಸ್ಪಷ್ಟನೆ ನೀಡಿದೆ.

ತೂಕ ಅಳತೆಗಳಿಗೆ ಸತ್ಯಾಪನೆ ಮಾಡಿ ಮುದ್ರೆ ಹಾಕಿ ತೂಕ ಅಳತೆಗಳಿಗೆ ಅನುಗುಣವಾಗಿ ಸತ್ಯಾಪನೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.

ಈ ಇಲಾಖೆಯಲ್ಲಿ ಖಾಸಗಿ ಏಜೆಂಟರ್ ಶುಲ್ಕ ಎಂಬ ಪರಿಕಲ್ಪನೆ ಇರುವುದಿಲ್ಲ, ಸರ್ಕಾರದಿಂದ ಲೈಸೆನ್ಸ್ ಪಡೆದ ತೂಕ ಅಳತೆಗಳ ದುರಸ್ತಿದಾರರು ತಾವು ದುರಸ್ತಿ ಮಾಡಿದ ಅಥವಾ ಸರ್ವೀಸ್ ಮಾಡಿದ ತೂಕ ಅಳತೆಗಳಿಗೆ ದುಡ್ಡನ್ನು ಪಡೆಯುತ್ತಿದ್ದರೆ ಅದು ಇಲಾಖೆಗೆ ಅಥವಾ ಸರ್ಕಾರಕ್ಕೆ ಸಂಬಂಧಿಸುವುದಿಲ್ಲ.

ತೂಕ ಅಳತೆ ಬಳಕೆದಾರರ ಹಾಗೂ ದುರಸ್ತಿದಾರರ ನಡುವಿನ ಒಪ್ಪಂದದಂತೆ ಅವರು ಪಡೆಯಬಹುದಾಗಿದೆ. ಇದರಲ್ಲಿ ಇಲಾಖೆಯ ಹಸ್ತಕ್ಷೇಪ ಇರುವುದಿಲ್ಲ, ಇಲಾಖೆಯ ಅಧಿಕಾರಿಗಳು ಸರ್ಕಾರಿ ಶುಲ್ಕವನ್ನು ಮಾತ್ರ ಪಡೆಯುತ್ತಿದ್ದಾರೆ. ದುರಸ್ತಿದಾರರ ದುಡ್ಡಿಗೂ ಇಲಾಖೆಗೂ ಸಂಬಂಧವಿರುವುದಿಲ್ಲವೆಂದು ಧಾರವಾಡ ಜಿಲ್ಲಾ ಸಹಾಯಕ ನಿಯಂತ್ರಕರಾದ ಮಧುಕರ ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

22/09/2020 06:47 pm

Cinque Terre

18.98 K

Cinque Terre

0

ಸಂಬಂಧಿತ ಸುದ್ದಿ