ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಲಾಟೆಯಿಂದ ಮನಸ್ಸು ನೊಂದಿದೆ...ದ್ವೇಷಾಸೂಯೆ ಬೇಡ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮೌಲಾನಾ ಸೈಯದ್ ನಿಸಾರ್ ಅಹ್ಮದ್ ಮಾತು

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ನಿಜಕ್ಕೂ ಮನಸ್ಸಿಗೆ ನೋವನ್ನುಂಟು ಮಾಡಿದೆ. ಹಿಂದೂ-ಮುಸ್ಲಿಂ ಅಣ್ಣತಮ್ಮಂದಿರಲ್ಲಿ ಕೈಮುಗಿದು ಕೇಳುತ್ತಿದ್ದೇನೆ. ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿ ಬೇಡಿಕೊಳ್ಳುತ್ತಿದ್ದೇನೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು ವಿನಃ ಯಾವುದೇ ಕಾರಣಕ್ಕೂ ದ್ವೇಷ ಅಸೂಯೆಗಳಿಂದ ಹೊಡೆದಾಡಿಕೊಂಡು ಜೀವನ ನಡೆಸುವಂತಾಗಬಾರದು ಎಂದು ಹುಬ್ಬಳ್ಳಿಯ ಕೇಶ್ವಾಪೂರದ ಮೌಲಾನಾ ಸೈಯದ್ ನಿಸಾರ್ ಅಹ್ಮದ್ ಖಾದ್ರಿ ಚಗನ್ ಸಾಹೇಬ ಮನವಿ ಮಾಡಿದ್ದಾರೆ.

ಮೊನ್ನೆ ನಡೆದ ಗಲಾಟೆಯ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ನಾವೆಲ್ಲರೂ ಭಾರತೀಯರು, ಶಾಂತಿ ಪ್ರಿಯರು. ನಾವು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡಬಾರದು. ಹುಬ್ಬಳ್ಳಿಯೇ ಇರಲಿ, ಕರ್ನಾಟಕವೇ ಇರಲಿ, ಭಾರತವೇ ಇರಲಿ, ಇಲ್ಲಿ ನಾವೆಲ್ಲರೂ ಒಂದೇ. ಯಾವುದೇ ಕಾರಣಕ್ಕೂ ಗಲಾಟೆಯನ್ನು ಮಾಡದೇ ದ್ವೇಷ ಅಸೂಯೆ ಅಶಾಂತಿಯ ಬೆಂಕಿಯಲ್ಲಿ ಬೇಯದೇ ಸೌಹಾರ್ದತೆಯಿಂದ ಜೀವನ ನಡೆಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ಗಲಾಟೆ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಲ್ಲಿ ನಾವೆಲ್ಲರೂ ಶಾಂತಿಯಿಂದ ಜೀವಿಸಬೇಕು. ಗಲಾಟೆ ಮಾಡುವುದು ಮನುಕುಲಕ್ಕೆ ಮಾರಕವಾಗಿದೆ. ದೇಶವೇ ಶಾಂತಿ ಸೌಹಾರ್ದತೆ ರಾಷ್ಟ್ರವಾಗಿದ್ದು, ಇಂತಹ ರಾಷ್ಟ್ರದಲ್ಲಿ ಜನ್ಮತಾಳಿದ ನಾವು ಯಾವುದೇ ಕಾರಣಕ್ಕೂ ದ್ವೇಷವನ್ನು ಬೆಳೆಸಬಾರದು ಎಂದು ನಾಡಿನ ಜನತೆಗೆ ಮೌಲಾನಾ ಮನವಿ ಮಾಡಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/04/2022 02:50 pm

Cinque Terre

74.23 K

Cinque Terre

49

ಸಂಬಂಧಿತ ಸುದ್ದಿ