ಧಾರವಾಡ: ಇದೇ ಅಕ್ಟೋಬರ್ 28 ರಿಂದ 30ರವರೆಗೆ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಬೈಠಕ್ ನಡೆಯಲಿದ್ದು, ಅದರ ಅಂಗವಾಗಿ ವಿದ್ಯಾಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈಗಾಗಲೇ ಆರ್‌ಎಸ್‌ಎಸ್ ಪ್ರಮುಖರಾದ ಮೋಹನ್ ಭಾಗವತ್ ಅವರು ಕೂಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತ ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಆರ್‌ಎಸ್‌ಎಸ್ ಬೈಠಕ್‌ಗೆ ಸಂಬಂಧಿಸಿದಂತೆ ಯಾವೆಲ್ಲ ರೀತಿಯಲ್ಲಿ ಭದ್ರತೆ ನೀಡಲಾಗಿದೆ ಎಂಬುದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ವಿವರಿಸಿದ್ದಾರೆ.
ಸದ್ಯ ವಿದ್ಯಾಕೇಂದ್ರಕ್ಕೆ ವಿವಿಧ ರಾಜ್ಯಗಳ ಆರ್‌ಎಸ್‌ಎಸ್ ಮುಖ್ಯಸ್ಥರು ಆಗಮಿಸುತ್ತಿದ್ದು, ಯಾವ ಗಣ್ಯರಿಗೆ ಯಾವ ಭದ್ರತೆ ಕೊಡಬೇಕಿದೆ ಎಂಬುದರ ಕುರಿತೂ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರೇ ಕೇಂದ್ರಕ್ಕೆ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.
Kshetra Samachara
26/10/2021 06:33 pm