ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶೋತ್ಸವ ಆಚರಣೆಯಲ್ಲಿ ಸೈಲೆಂಟ್ ಆದ ಹುಬ್ಬಳ್ಳಿ ಡಿಜೆ ಸೌಂಡ್: ಸಿಂಪಲ್ ಸೆಲೆಬ್ರೆಷನ್...!

ಹುಬ್ಬಳ್ಳಿ: ಅದು ರಾಜ್ಯದ ಜನರ ಚಿತ್ತವನ್ನೇ ತನ್ನತ್ತ ನೋಡುವಂತೆ ಮಾಡಿದ್ದ ಆಚರಣೆ. ಈ ಆಚರಣೆಗೆ ರಾಜ್ಯ ಮಾತ್ರವಲ್ಲದೇ ಅಂತರರಾಜ್ಯದಿಂದ ಅಭಿಮಾನಿಗಳು ಆಗಮಿಸುತ್ತಿದ್ದರೂ. ಈ ಆಚರಣೆ ಸೌಂಡ್ ಗೆ ಮರುಳಾಗದವರೇ ಇಲ್ಲ. ಆದರೆ ಈಗ ಮಾತ್ರ ಸೌಂಡ್ ಇಲ್ಲದೆ ಸೈಲೆಂಟ್ ಆಗಿದೆ. ಹಾಗಿದ್ದರೇ ಏನಿದು ಆಚರಣೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...

ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶನ ಆಚರಣೆ ಅಂದರೇ ರಾಜ್ಯದ ಜನರ ದೃಷ್ಟಿಯನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದ ಹಬ್ಬ. ಆದರೆ ಕಿಲ್ಲರ್ ಕೊರೋನಾ ಹಾವಳಿಯಿಂದ ಆಚರಣೆ ಸಂಭ್ರಮ ಸಂಪೂರ್ಣ ಸ್ಥಬ್ಧವಾಗಿದ್ದು, ಡಿಜೆ ಅಬ್ಬರವಿಲ್ಲದೇ ವಾಣಿಜ್ಯನಗರಿಯೇ ಸಂಪೂರ್ಣ ಸೈಲೆಂಟ್ ಆಗಿದೆ. ಹೌದು..ಹುಬ್ಬಳ್ಳಿಯ ಗಣೇಶನ ವಿಸರ್ಜನೆ ಹಾಗೂ ಆಚರಣೆ ನೋಡಲು ಜನರು ದೇಶದ ವಿವಿಧ ಮೂಲೆಗಳಿಂದ ಆಗಮಿಸುತ್ತಿದ್ದರು. ಆದರೆ ಈಗ ಶಾಂತಿಯುತ ಆಚರಣೆ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮೀಷನರೇಟ್ ನಿರ್ಧಾರವನ್ನು ಕೈಗೊಂಡಿದೆ.

ಬೈಟ್: ಲಾಭುರಾಮ್ ಪೊಲೀಸ್ ಆಯುಕ್ತರು

ಎಲ್ಲೆಡೆಯೂ ಡಿಜೆ ಸೌಂಡ್, ಸಖತ್ ಡ್ಯಾನ್ಸ್ ನಿಂದ ಕೂಡಿರುತ್ತಿದ್ದ ಹುಬ್ಬಳ್ಳಿ ಗಣೇಶೋತ್ಸವ ಈಗ ಸೈಲೆಂಟ್ ಆಗಿದೆ. ಇನ್ನೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ‌ನಗರದಲ್ಲಿ ಸೂಕ್ತ ಬಂದೋಬಸ್ತ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಗಣೇಶ ಮಂಡಳಿಗಳು ಕೋವಿಡ್ ನಿಯಮ ಪಾಲಿಸಲು ‌ಕಟ್ಟುನಿಟ್ಟಿನ‌ ಸೂಚನೆ ನೀಡಲಾಗಿದೆ. ಈ ವರ್ಷವೂ ಗಣೇಶ ಮೆರವಣಿಗೆಗೆ ಅವಕಾಶ ನಿರಾಕರಣೆ ಮಾಡಲಾಗಿದ್ದು, ಕೇವಲ 20 ಜನರು ಮಾತ್ರ ಗಣೇಶ ವಿಸರ್ಜನೆ ಪಾಲ್ಗೊಳ್ಳಲು ಸೂಚನೆ ನೀಡಲಾಗಿದ್ದು, ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

11/09/2021 04:12 pm

Cinque Terre

39.51 K

Cinque Terre

5

ಸಂಬಂಧಿತ ಸುದ್ದಿ