ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಂತು ಕಟ್ಟಿಲ್ಲವೆಂದು ಗಾಡಿ ಸೀಜ್, ನ್ಯಾಯಕ್ಕಾಗಿ ಮೊರೆಯಿಟ್ಟ ಗಾಡಿ ಮಾಲಿಕ

ಹುಬ್ಬಳ್ಳಿ: ಸ್ವಂತ ದುಡಿಮೆ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸಲು ಒಂದು ಟಾಟಾ ಏಸ್ ವಾಹನವನ್ನು ಕಂತುಗಳ ಮೂಲಕ ಖರೀದಿ ಮಾಡಿ ಅದರಿಂದ ಬರೋ ಬಾಡಿಗೆಯಲ್ಲಿ ಜೀವನ ನಡೆಸುತ್ತಿದ್ದ ಕುಟುಂಬವೊಂದಕ್ಕೆ ಇಂಡಸ್ ಇಂಡ್ ಫೈನಾನ್ಸ್ ಬೆಂಬಿಡದ ಭೂತವಾಗಿ ಕಾಡಿ ಬದುಕು ಹೈರಾಣಾಗಿಸಿದೆ.

ಹೌದು,ಹೀಗೆ ಕೈಯಲ್ಲಿ ದಾಖಲೆಗಳನ್ನು ಹಿಡಿದುಕೊಂಡು ನಮಗೆ ನ್ಯಾಯ ಕೊಡಿಸಿ, ನಮ್ಮ ವಾಹನವನ್ನು ಬಿಡಿಸಿಕೊಡಿ ಎಂದು ಅಳಲನ್ನು ತೋಡಿಕೊಳ್ಳುತ್ತಿರುವ ಇವರು ವಿಷ್ಣು ಬಳ್ಳಾರಿ ಹಾಗೂ ಸಹೋದರ. ಇವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಇಂಡಸ್ ಬ್ಯಾಂಕ್ ಮೂಲಕ ಒಂದು ಟಾಟಾ ಏಸ್‌ನ್ನು ಕಂತುಗಳ ಮೂಲಕ ಖರೀದಿ ಮಾಡಿ, ಪ್ರತಿ ತಿಂಗಳು ಸರಿಯಾಗಿ ಕಂತನ್ನು ತುಂಬುತ್ತಿದ್ದಾರೆ‌‌.ಆದರೆ ಸರ್ಕಾರದ ಲಾಕ್ ಡೌನ್ ರೂಲ್ ನಿಂದ ಯಾವುದೇ ಕೆಲಸ ಇಲ್ಲದೇ ಎರಡು ತಿಂಗಳು ಕಂತನ್ನು ತುಂಬಿಲ್ಲ ಎಂದು ಇಂಡಸ್ ಇಂಡ್ ಫೈನಾನ್ಸ್ ಸಿಬ್ಬಂದಿ ಟಾಟಾ ಏಸ್‌ನ್ನು ಸೀಜ್ ಮಾಡಿದ್ದಾರೆ.

ಆದರೆ ಸದ್ಯ ಫೈನಾನ್ಸ್ ನವರು ಸೀಜ್ ಮಾಡಿದ ಟಾಟಾ ಏಸ್‌ನ್ನು ಸುಮಾರು ಒಂದು ವರ್ಷಗಳ ಕಾಲ ತಾವೇ ದುಡಿಸಿ ಹೊಸ ವಾಹನವನ್ನು ಹಾಳು ಮಾಡಿ ಕೊಟ್ಟಿದ್ದಾರೆ ಎಂದು ವಾಹನದ ಮಾಲೀಕರು ಇಂಡಸ್ ಇಂಡ್ ಫೈನಾನ್ಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಬಡ ಕುಟುಂಬದವರಾದ ವಿಷ್ಣು ಬಳ್ಳಾರಿ ಅವರು ಈ ಸಮಸ್ಯೆ ಬಗ್ಗೆ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದರೆ, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ಹೋಗಿ ಅಂತಾರೆ. ಅಲ್ಲಿ ಹೋದರೆ ಇದೆಲ್ಲ ಬಿಟ್ಟು ಬಿಡು ಎಂದು ಬೆದರಿಕೆ ಹಾಕುತ್ತಿದ್ದಾರೆಂದು ವಿಷ್ಣು ಬಳ್ಳಾರಿ ಹೇಳುತ್ತಾರೆ. ಆದ ಕಾರಣ ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲನೆ ಮಾಡಿ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಆಶಯ.

Edited By : Nagesh Gaonkar
Kshetra Samachara

Kshetra Samachara

05/03/2022 04:00 pm

Cinque Terre

61.61 K

Cinque Terre

5

ಸಂಬಂಧಿತ ಸುದ್ದಿ