ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಹುಬ್ಬಳ್ಳಿ-ಧಾರವಾಡದಲ್ಲಿ ಸಿಗಲ್ಲ ರೇಷನ್...ಆದರೂ ಬೇಡ ಟೆನ್ಶನ್

ಧಾರವಾಡ : ಸಾರ್ವಜನಿಕ ವಿತರಣಾ ಪದ್ಧತಿಯಡಿ ಕಾರ್ಡುದಾರರಿಗೆ ಪ್ರತಿ ತಿಂಗಳು ಪಡಿತರ ಸಾಮಗ್ರಿಗಳನ್ನು ಗಣಕ ಯಂತ್ರದಲ್ಲಿ ಕಾರ್ಡುದಾರರ ಆಧಾರ್ ಆಧಾರಿತ ಓಪಿಟಿ ಅಥವಾ ಜೀವಮಾಪಕ ಪಡೆದು ವಿತರಿಸಲಾಗುತ್ತಿದೆ. ಆಹಾರ ಇಲಾಖೆಯ ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ಸೆ.24 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸರ್ವರ್ ಕಾರ್ಯನಿರ್ವಹಿಸುವುದಿಲ್ಲ.

ಕಾರ್ಡುದಾರರು ಮುಂಜಾನೆ 8 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 1.00 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಓಪಿಟಿ ಅಥವಾ ಜೀವಮಾಪಕ ನೀಡಿ ತಮ್ಮ ಪಡಿತರ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Edited By :
Kshetra Samachara

Kshetra Samachara

23/09/2020 07:05 pm

Cinque Terre

17.27 K

Cinque Terre

4

ಸಂಬಂಧಿತ ಸುದ್ದಿ