ಕಲಘಟಗಿ: ಐದು ರೂಪಾಯಿ ಮಾಸ್ಕ್,ನೂರು ರೂಪಾಯಿ ದಂಡ ! ಇದೇನಪ್ಪಾ, ಎಂದು ಆಶ್ಚರ್ಯ ಪಡಬೇಡಿ.
ಪಟ್ಟಣದಲ್ಲಿ ಕನಿಷ್ಠ ಬೆಲೆಯ ಮಾಸ್ಕ್ ನ್ನು ಸಹ ಹಾಕದೆ ವಾಹನ ಚಾಲನೆ ಮಾಡುವಂತಹ ವಾಹನ ಚಾಲಕರಿಗೆ, ಪಟ್ಟಣ ಪಂಚಾಯತ ಅಧಿಕಾರಿಗಳು ದಂಡ ಹಾಕುವ ಕಾರ್ಯಾಚರಣೆಯನ್ನು ಶನಿವಾರ ಮಾಡಿದರು.
ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ಮಾಸ್ಕ್ ಹಾಕದ ವಾಹನ ಸವಾರರನ್ನು ತಡೆದು,ಸ್ಥಳದಲ್ಲಿಯೇ ದಂಡದ ಚೀಟಿ ನೀಡಿ ದಂಡವನ್ನು ವಸೂಲಿ ಮಾಡಿ ಎಚ್ಚರಿಸಲಾಯಿತು.
ಐದು ರೂಪಾಯಿ ಮಾಸ್ಕ್,ನೂರು ರೂಪಾಯಿ ದಂಡಕ್ಕೆ ಕಾರಣವಾಯಿತು. ಇನ್ನಾದರು ಸಾರ್ವಜನಿಕರು ಮಾಸ್ಕ್ ಹಾಕಿ ಸುರಕ್ಷತೆ ಕಾಪಾಡುವರೆ ಎಂಬುದನ್ನು ಕಾದು ನೋಡ ಬೇಕಿದೆ.
Kshetra Samachara
03/10/2020 07:47 pm