ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮೆಗಾ ಅದಾಲತ್‌ ನಲ್ಲಿ 52 ವರ್ಷದ ಬಳಿಕ ಒಂದಾದ ವೃದ್ಧ ದಂಪತಿಗಳು !

ವರದಿ: ಉದಯ ಗೌಡರ

ಕಲಘಟಗಿ: ಮೆಗಾ ಲೋಕ ಆದಾಲತ್ ನಲ್ಲಿ ನಡೆದ ವಿಶೇಷವೆಂದರೆ ಅನೇಕ ವರ್ಷಗಳ ಕಾಲ ದೂರವಿದ್ದ ಹಿರಿಯ ವೃದ್ಧ ದಂಪತಿಗಳನ್ನ ಒಂದು ಮಾಡಿದ ಅಪರೂಪದ ಘಟನೆ ಕಲಘಟಗಿ ನ್ಯಾಯಾಲಯದಲ್ಲಿ ನಡೆಯಿತು.

ಬಸಪ್ಪ ಅಗಡಿ (85) ವರ್ಷ ಹಾಗೂ ಕಲ್ಲವ್ವ ಅಗಡಿ (80) ವರ್ಷ ವೃದ್ಧ ದಂಪತಿಗಳು 52 ವರ್ಷಗಳಿಂದ ದೂರ ಇದ್ದರು,ಗಂಡ ಬಸಪ್ಪ ಅಗಡಿಯಿಂದ ಜೀವನಾಂಶ ಪಡೆಯುತ್ತಿದ್ದಳು.

ಇತ್ತೀಚೆಗೆ ಪತಿ ಬಸಪ್ಪ ಜೀವನಾಂಶ ಕೋಡಲು ವಿಫಲನಾಗಿದ್ದರು. ಸ್ಥಳೀಯ ಹಿರಿಯ ದಿವಾನಿ ನ್ಯಾಯಲಯ ಇದನ್ನ ಗಂಭೀರವಾಗಿ ಪರಿಗಣಿಸಿ, ವಿಶೇಷ ಮೆಗಾ ಅದಾಲತ್‌ನಲ್ಲಿ ಗಂಡನನ್ನು ಕರೆಯಿಸಿ, ನ್ಯಾಯಾಲಯದ ನ್ಯಾಯಧೀಶರಾದ ಜಿ ಆರ್ ಶೆಟ್ಟರ, ಗಂಡ-ಹೆಂಡತಿ ಇಬ್ಬರನ್ನೂ ಪರಸ್ಪರ ಒಂದುಗೂಡಿಸಿ ರಾಜೀ ಸಂಧಾನ ಮಾಡಿದರು. ವಕೀಲರಾದ ಜಿ.ಆರ್.ಗಾಣಗೇರ ವಕಾಲತ್ತು ವಹಿಸಿದ್ದರು.

Edited By : Manjunath H D
Kshetra Samachara

Kshetra Samachara

25/06/2022 10:56 pm

Cinque Terre

79.52 K

Cinque Terre

1

ಸಂಬಂಧಿತ ಸುದ್ದಿ