ನವಲಗುಂದ : ಸತತವಾಗಿ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಸುದ್ದಿಗಳನ್ನು ಬಿತ್ತರಿಸುತ್ತಾ ಬಂದರು ಸುಧಾರಣೆ ಮಾತ್ರ ಆಗಿಲ್ಲ ದೃಶ್ಯಗಳಿಂದ ಸಾಬೀತಾಗುತ್ತೆ, ಅದಕ್ಕೆ ಈಗ ಇನ್ನೊಂದು ಪ್ರಮುಖ ಕಾರಣ ಅಂದ್ರೆ ಪಾರ್ಕಿಂಗ್ ವ್ಯವಸ್ಥೆ, ಬಸ್‌ಗಳ ಸಂಚಾರಕ್ಕೆ ತೊಡಕಾದ ಇಂತಹ ಪಾರ್ಕಿಂಗ್ ಯಾಕಪ್ಪ ಅನ್ನೋ ಆಕ್ರೋಶ ಸಾರ್ವಜನಿಕರದ್ದು.
ಹೌದು... ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲಿ ಭದ್ರತೆ ಕೊರತೆ ಸಹ ಇದೆ ಅನ್ನೋದು ಮೇಲ್ನೋಟಕ್ಕೆ ಕಾಣಸಿಗುತ್ತೆ, ಆದರೆ ಬಸ್ ನಿಲ್ದಾಣದ ಆವರಣದಲ್ಲಿ ಯಾಕೆ ಪಾರ್ಕಿಂಗ್ ವ್ಯವಸ್ಥೆ ಅನ್ನೋದು ಸಾರ್ವಜನಿಕ ಪ್ರಶ್ನೆ.
ಇಲ್ಲಿ ದಿನಕ್ಕೆ ನೂರಾರು ಬಸ್ ಹಾಗೂ ಸಹಸ್ರಾರು ಪ್ರಯಾಣಿಕರು ಸಂಚರಿಸುತ್ತಾರೆ. ಇಲ್ಲಿ ನಿಲುಗಡೆಯಾದ ವಾಹಣಗಳಿಂದ ಬಸ್ ಸಂಚಾರಕ್ಕೆ ತೊಡಕು, ಇನ್ನು ಸುಸರ್ಜಿತ ವ್ಯವಸ್ಥೆಯಂತೂ ದೂರದ ಮಾತು. ಅಷ್ಟೇ ಅಲ್ಲ ಆವರಣದಲ್ಲಿ ಸಿಕ್ಕ ಸಿಕ್ಕಲ್ಲೇ ಕಾರು ಪಾರ್ಕಿಂಗ್ ಆಗುತ್ತಿದೆ. ಇದನ್ನು ಹೇಳಲು ಕೇಳಲು ಯಾರು ಸಹ ಇಲ್ಲದಂತಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಪಾರ್ಕಿಂಗ್ ಸ್ಥಳದಲ್ಲೇ ಪಾರ್ಕಿಂಗ್ ಆಗಬೇಕು, ಪಾರ್ಕಿಂಗ್ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬಹು ಮುಖ್ಯವಾಗಿ ಎಲ್ಲಿ ಬೇಕಲ್ಲಿ ವಾಹಣ ನಿಲುಗಡೆಗೆ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಪಾರ್ಕಿಂಗ್ ಟೆಂಡರ್ ತೆಗೆದುಕೊಂಡವರು, ಡಿಪೋ ವ್ಯವಸ್ಥಾಪಕರಾಗಲಿ ಎಚ್ಚೆತ್ತುಕೊಳ್ಳಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
24/08/2022 12:37 pm