ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: PSI ಅಕ್ರಮ ಕೇಸ್‌; ಸಿದ್ದರಾಮಯ್ಯ ಮುಂದೆ ಅಳಲು ತೋಡಿಕೊಂಡ ವಿದ್ಯಾರ್ಥಿಗಳು

ಹುಬ್ಬಳ್ಳಿ: ಪಿಎಸ್‌ಐ ಆಗಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳಲು ವಿದ್ಯಾರ್ಥಿಗಳು, ಹಗಲು ರಾತ್ರಿ ಎನ್ನದೆ ಓದಿ ಗುರಿ ಮುಟ್ಟುವ ವೇಳೆ ಯಾರು ಮಾಡಿದ ತಪ್ಪಿಗೆ ಈ ಅಮಾಯಕ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಡುತ್ತಾರೆ ಎನ್ನುವ ಗಾದೆ ಈ ವಿದ್ಯಾರ್ಥಿಗಳ ಜೀವನಕ್ಕೆ ಹೊಲಿಕೆ ಯಾಗುವುದು ಖಂಡಿತ.

ಬಡತನದಲ್ಲಿ ಅರಳಬೇಕಾದ ಪಿಎಸ್ಐ ಪ್ರತಿಭೆಗಳ ಕನಸು ಮುಟುಕುಗೊಂಡಿದ್ದು ದಿಕ್ಕೆ ತೊಚದಂತಾಗಿದೆ. ಯಾರು ಮಾಡಿದ ಕೆಲಸಕ್ಕೆ ಈ ವಿದ್ಯಾರ್ಥಿಗಳ ಜೀವನ ನಶ್ವರವಾಗಿದೆ. ಸಾಕಷ್ಟು ಕಷ್ಟಪಟ್ಟು ಹಣವನ್ನು ಖರ್ಚು ಮಾಡಿ ಈ ಹುದ್ದೆಯನ್ನು ಪಡೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೆಲವೊಬ್ಬ ವಿದ್ಯಾರ್ಥಿಗಳ ವಯೋಮಿತಿ ಪೂರ್ಣಗೊಂಡರೆ ಇನ್ನೊಬ್ಬ ವಿದ್ಯಾರ್ಥಿಗೆ ಹಣದ ಅಭಾವ. ಇಂತಹ ಹಲವಾರು ಸಮಸ್ಯೆಗಳನ್ನು ಪಿಎಸ್‌ಐ ಹುದ್ದೆಗೆ ನೇಮಕವಾದರೂ ಈ ಬಡಪಾಯಿಗಳು ತೊಂದರೆ ಅನುಭವುಸುತ್ತಿರುವುದು ಯಾವಾಗ ಕೊನೆಯಾಗುತ್ತದೆ ಎಂಬುದು ತಿಳಿದಂತಾಗಿದೆ.

ಹುಬ್ಬಳ್ಳಿಗೆ ಆಗಮನಿಸಿದ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪಿಎಸ್ಐ ಅಭ್ಯರ್ಥಿಗಳು ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಸಲ್ಲಿಸಿದ್ದಾರೆ. ಸಿಐಡಿ ಈಗಾಗಲೇ ನಮ್ಮನ್ನ ವಿಚಾರಣೆ ಮಾಡಿದೆ. ಇನ್ನು ಹತ್ತು ತನಿಖಾ ಸಂಸ್ಥೆಗಳು ನಮ್ಮನ್ನ ವಿಚಾರಣೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷಯಾಗಲಿ, ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡಲಿ. ನಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ. ಸರ್ಕಾರ ಎಚ್ಚೆತ್ತುಕೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅಳಲು ತೊಡಿಕೊಂಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳ ಜತೆಗೆ ಸರ್ಕಾರ ಚೆಲ್ಲಾಟ ಆಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಪಿಎಸ್ಐ ಹಗರಣದ ಬಗ್ಗೆ ಒಂದು ಕಡೆ ತನಿಖೆ ನಡೆಯುತ್ತಿದ್ದು, ಈಗಿರುವಾಗ ಮರು ಪರೀಕ್ಷೆಗೆ ಆದೇಶ ಮಾಡಿದ್ದು ಏಕೆ..? ಎಂಬುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Shivu K
Kshetra Samachara

Kshetra Samachara

08/06/2022 11:58 am

Cinque Terre

20.11 K

Cinque Terre

0

ಸಂಬಂಧಿತ ಸುದ್ದಿ