ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮವಸ್ತ್ರದಲ್ಲಿ ಸ್ಕಾರ್ಫ್- ಸುರಕ್ಷತೆಗೆ ಕ್ರಮ ಕೈಗೊಳ್ಳಲು ಶಿಕ್ಷಣಾಧಿಕಾರಿಗೆ ಮನವಿ

ಹುಬ್ಬಳ್ಳಿ: ಹುಬ್ಬಳ್ಳಿ ನಗರ ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಸ್ಕಾರ್ಫ್ ಸಮವಸ್ತ್ರವಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳೆ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಶಾಲೆಗಳು ಮುಖ್ಯ ಶಿಕ್ಷಕರು ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಹಳೇ ಹುಬ್ಬಳ್ಳಿಯ ಅಂಜುಮನ್ ಉರ್ದು ಪ್ರೌಢಶಾಲೆ, ಘಂಟಿಕೇರಿಯ ಆಂಗ್ಲೋ ಉರ್ದು ಪ್ರೌಢಶಾಲೆ, ಕೌಲ್‌ಪೇಟೆಯ ಉರ್ದು ಬಾಲಕಿಯರ ಪ್ರೌಢಶಾಲೆ, ಗವಿ ಮೊಹಲ್ಲದ ಮೌಲಾನಾ ಅಬುಲ್‌ ಕಲಾಮ್‌ ಆಜಾದ್‌ ಶಾಲೆ, ಘಂಟಿಕೇರಿಯ ಸರ್ದಾರ್‌ ಮೆಹಬೂಬ್‌ ಅಲಿಖಾನ್‌ ಆಂಗ್ಲ ಮಾಧ್ಯಮ ಶಾಲೆ, ಕೇಶ್ವಾಪುರದ ರೇಶ್ಮಿ ಆಲ್‌ಮಿಲಾದ್‌ ಉರ್ದುಶಾಲೆ ಮತ್ತು ಸಿಟಿ ರೇಶ್ಮಿ ಕನ್ನಡ ಪ್ರೌಢಶಾಲೆ ಮುಖ್ಯ ಶಿಕ್ಷಕರು ಪತ್ರ ಬರೆದಿದ್ದಾರೆ.

'ಶಾಲೆಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಈಚೆಗೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಸ್ಕಾರ್ಫ್ ಧರಿಸಿದರೆ ಅವರಿಗೆ ತೊಂದರೆಯಾಗಬಹುದು. ಈ ಕುರಿತು ಎಚ್ಚರಿಕೆ ವಹಿಸಬೇಕು' ಎಂದು ಕೋರಿದ್ದಾರೆ.

Edited By : Vijay Kumar
Kshetra Samachara

Kshetra Samachara

25/03/2022 10:32 am

Cinque Terre

20.05 K

Cinque Terre

0

ಸಂಬಂಧಿತ ಸುದ್ದಿ