ಹುಬ್ಬಳ್ಳಿ: 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ದಿನದ ನಿಮಿತ್ತವಾಗಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಉತ್ತರ ಸಂಚಾರ ಪೊಲೀಸ್ ಠಾಣೆ ಅಂಗವಾಗಿ, ಇಂದು ವಿವಿದ ಶಾಲೆಯ ಮಕ್ಕಳು ಸೇರಿಕೊಂಡು ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಹಾಕಿ ಜೀವ ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು. ನಂತರ ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಗಳು ಮತ್ತು ಗಣ್ಯ ವ್ಯಕ್ತಿಗಳು ಸೇರಿಕೊಂಡು ಚನ್ನಮ್ಮ ಸರ್ಕಲ್ ದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ರ‌್ಯಾಲಿ ಮಾಡುವುದರ ಮೂಲಕ ಜಾಗೃತಿ ಮೂಡಿಸಿದರು..
ಈ ಸಂದರ್ಭದಲ್ಲಿ ಪೂರ್ವ ಸಂಚಾರ ಇನ್ಸ್ಪೆಕ್ಟರ್ ಎನ್.ಸಿ ಕಾಡದೇವರಮಠ, ವಿಶ್ವ ಮಾನ್ಯ ಪುರಸ್ಕೃತರಾದ ಸಂತೋಷ ಆರ್ ಶೆಟ್ಟಿ, ಪಿಎಸ್ಐ ದೇಸಾಯಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರರು ಭಾಗವಹಿಸಿದ್ದರು.
Kshetra Samachara
26/02/2021 01:41 pm