ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಾಸ್ಥ್ಯ ಸಮಾಜಕ್ಕೆ ಕಾನೂನು ಅರಿವು ಮುಖ್ಯ; ಡಾ.ಕಮಲಾ ಬೈಲೂರ

ಹುಬ್ಬಳ್ಳಿ: ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ ಮತ್ತು ಸ್ವಾಸ್ಥ್ಯ ಸಮಾಜಕ್ಕೆ ಕಾನೂನು ಅರಿವು ಮುಖ್ಯ ಎಂದು ಹುಬ್ಬಳ್ಳಿ ತಾಲೂಕು ಗಾಂಧಿವಾಡ ವಲಯದ ನಾಗಶೆಟ್ಟಿಕೂಪ್ಪದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ವರ್ಷದ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ ನಾಗಶೆಟ್ಟಿಕೋಪ್ಪದ ಸರಕಾರಿ ಪ್ರೌಡ ಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜನೆ ಮಾಡಿ ನಂತರ ಮಾತಾನಾಡಿ, ಯೋಜನಾದಿಕಾರಿಗಳಾದ ಡಾ.ಕಮಲವ್ವಾ ಬೈಲೂರ ಮಕ್ಕಳ ಹಕ್ಕುಗಳ ಬಗ್ಗೆ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಶೈಕ್ಷಣಿಕ ಹಕ್ಕುಗಳ ಬಗ್ಗೆ ಬಾಲ ಮಂದಿರ, ಬಾಲಕಿಯರ ಮಂದಿರ ಇನ್ನು ಇಲಾಖೆಯ ಅನೇಕ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಎಲ್ಲರಿಗೂ ಕಾನೂನು ಮಾಹಿತಿ ಅಗತ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾನೂನು ಸಲಹೆಗಾರರಾದ ನೂರಜಾನ್ ಕಿಲ್ಲೆದಾರ, ಮಕ್ಕಳ ರಕ್ಷಣಾ ಘಟಕದ ಭಾರತಿ ಬಂಡಿ, ಮಹಾನಗರ ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಕಾಶ ಕುರಹಟ್ಟಿ, ಫಿರಾಜಿ ಖಂಡೇಕರ, ವೈದ್ಯಾಧಿಕಾರಿ ಡಾ.ಪ್ರಕಾಶ ನರಗುಂದ, ಶಾಲಾ ಮುಖ್ಯ ಶಿಕ್ಷಕ ಮಹಾಲೆ, ಎಸ್‌.ಎಂ.ಪವಾರ, ಚಿದಾನಂದ ದಂಡಪ್ಪನವರ, ಮಹಿಳಾ ಮೇಲ್ವಿಚಾರಕಿ ಸವಿತಾ ಬದ್ದಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

27/10/2021 04:27 pm

Cinque Terre

15.48 K

Cinque Terre

0

ಸಂಬಂಧಿತ ಸುದ್ದಿ