ಧಾರವಾಡದ ಡಿಎಆರ್ ಕವಾಯತು ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಆಕರ್ಷಕ ಪೊಲೀಸ್ ಕವಾಯತು ನಡೆಯಿತು. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಸೇರಿದಂತೆ ಅನೇಕರು ಈ ಕವಾಯತ್ತಿಗೆ ಸಾಕ್ಷಿಯಾದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ 22 ನೇ ತಂಡದ ಹಾಗೂ ಎರಡನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.
ತರಬೇತಿ ಪಡೆದು ತಮ್ಮ ವೃತ್ತಿಗೆ ಅಣಿಯಾಗುವ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ ಆ ಮೂಲಕ ತರಬೇತಿ ಅವಧಿ ಮುಗಿಸಿ ಹೊರ ನಡೆದರು.
Kshetra Samachara
01/02/2021 10:06 am