ಕುಂದಗೋಳ : ಒಂದಲ್ಲಾ, ಎರಡಲ್ಲಾ, ಕೊರೊನಾ ವೈರಸ್ ಮೂರನೇ ಅಲೆ ಬಂದ್ರೂ ನಮ್ಮ ಜನರಿಗೆ ಮಾಸ್ಕ್ ಹಾಕೋಬೇಕು ಎನ್ನುವ ಜಾಗೃತೆ ಬರ್ತಿಲ್ಲಾ ನೋಡಿ, ಈ ಕಾರಣ ಕೇವಲ ಹತ್ತು ರೂಪಾಯಿ ಮಾಸ್ಕ್'ಗೋಸ್ಕರ್ ನೂರು ಇನ್ನೂರು ರೂಪಾಯಿ ಹಣವನ್ನು ದಂಡ ಕಟ್ಟುವ ಸ್ಥಿತಿಗೆ ಅವರ ತಪ್ಪಿಂದ ಅವರೇ ಸಿಲುಕಿದ್ದಾರೆ.
ಈಗಾಗಲೇ ಕೊರೊನಾ ವೈರಸ್ ಮೂರನೇ ಅಲೆ ಮುಂಜಾಗ್ರತೆ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದ ಸರ್ಕಾರ ಮಾಸ್ಕ್, ಸಾಮಾಜಿಕ ಅಂತರಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಿದೆ, ಆದ್ರೇ ಈ ಜನ ಮಾತ್ರ ಆ ನಿಯಮ ಕೇಳ್ತಾ ಇಲ್ಲಾ, ಪಾಲಿಸ್ತಾ ಇಲ್ಲಾ ಈ ಕಾರಣ ಸುಖಾ ಸುಮ್ಮನೆ ದಂಡ ಕಟ್ಟುತ್ತಿದ್ದಾರೆ.
ಇಂದು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಮಾಸ್ಕ್ ಹಾಕದ ಇರುವ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದು, ವಾಹನ ಸವಾರರು ದಂಡ ಕಟ್ಟುವ ಪ್ರಸಂಗಕ್ಕೆ ಸಿಲುಕುತ್ತಿದ್ದಾರೆ.
ಆದೇ ಹತ್ತು ರೂಪಾಯಿ ಮಾಸ್ಕ್ ಖರೀದಿಸಿದ್ರೇ ದಂಡದ ಹಣದ ಜೊತೆ ತಮ್ಮ ಅಮೂಲ್ಯ ಜೀವ ರಕ್ಷಣೆಯೂ ಆಗುತ್ತೆ ಎಂಬುದು ಸಧ್ಯ ದಂಡ ಕಟ್ಟಿದ ಮೇಲಾದ್ರೂ ಜನರಿಗೆ ತಿಳಿಯಬೇಕಿದೆ.
Kshetra Samachara
17/01/2022 03:28 pm