ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಂಜೆ ಹೊತ್ತಿಗೆ ಸೈರನ್ ಹಾಕಿದ ಪೊಲೀಸ್ ವಾಹನಗಳು

ಧಾರವಾಡ: ಕೊರೊನಾ ಹಿನ್ನೆಲೆಯಲ್ಲಿ ಶನಿವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಧಾರವಾಡ ನಗರದ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಪೊಲೀಸ್ ವಾಹನಗಳು ಸಂಜೆ ಹೊತ್ತಿಗೆ ಸೈರನ್ ಸೌಂಡ್ ಮಾಡಿವೆ.

ಸಂಕ್ರಾಂತಿ ಹಬ್ಬ ಇದ್ದ ಹಿನ್ನೆಲೆಯಲ್ಲಿ ಕರ್ಫ್ಯೂವನ್ನೂ ಲೆಕ್ಕಿಸದ ಜನ ಕೆಲಗೇರಿ ಕೆರೆ ಬಳಿ ಜಮಾಯಿಸಿದ್ದರು. ನಗರ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ಕಡೆ ಹಬ್ಬದ ಸಂಭ್ರಮ ಜೋರಾಗಿತ್ತು.

ಆದರೆ, ಧಾರವಾಡದ ಸುಭಾಷ ರಸ್ತೆ, ಟಿಕಾರೆ ರಸ್ತೆ, ಸಪ್ತಾಪುರ ಸೇರಿದಂತೆ ಅನೇಕ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಸಂಜೆ ಹೊತ್ತಿಗೆ ಮತ್ತೆ ರಸ್ತೆಗಿಳಿದ ಪೊಲೀಸ್ ವಾಹನಗಳು ಸೈರನ್ ಹಾಕುತ್ತ ಸಿಟಿ ರೌಂಡ್ ಹಾಕಿದವು.

Edited By : Shivu K
Kshetra Samachara

Kshetra Samachara

15/01/2022 10:37 pm

Cinque Terre

27.71 K

Cinque Terre

4

ಸಂಬಂಧಿತ ಸುದ್ದಿ