ಹುಬ್ಬಳ್ಳಿ: ಈ ಸರ್ಕಾರಕ್ಕೆ ಬಡವರ ಕಣ್ಣೀರು ಕಾಣುತ್ತಿಲ್ಲವೇ? ಲಾಕ್ ಡೌನ್ ಹಾಗೂ ವಿಕೇಂಡ್ ಕರ್ಫ್ಯೂದಂತಹ ಶಬ್ದ ಕೇಳುತ್ತಿದ್ದಂತೆ, ದಿನದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಬಡವರಿಗೆ ಕುತ್ತು ಬಂದೊದಗಿದೆ. ಇಂತಹ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ ವಾಣಿಜ್ಯ ನಗರಿ ಹುಬ್ಬಳ್ಳಿ. ಸರ್ಕಾರದ ನಿಯಮಕ್ಕೆ ದಿನಂಪ್ರತಿ ದುಡಿದು ತಿನ್ನವವರ ಪರಿಸ್ಥಿತಿ ನೋಡತೀರದಾಗಿದೆ. ಬೀದಿ ಬದಿ ವ್ಯಾಪಾರಸ್ಥರು ಲಾಕ್ ಡೌನ್, ಕರ್ಫ್ಯೂದಂತಹ ನಿಯಮಗಳನ್ನು ತೆಗೆದುಹಾಕಿ ಎಂದು ಕಣ್ಣೀರು ಹಾಕುತ್ತ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ... ಆ ಕಣ್ಣೀರ ಕಥೆ ನೀವೆ ಕೇಳಿ....
ಇನ್ಮಾಂದಾದರು ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ, ಲಾಕ್ ಡೌನ್, ಕರ್ಫ್ಯೂದಂತಹ ವಸ್ತ್ರವನ್ನು ಬಿಟ್ಟು ಬಡವರ ತುತ್ತಿನ ಚೀಲಕ್ಕೆ ಕುತ್ತು ಬಾರದಂತೆ ನೋಡಿಕೊಳ್ಳಬೇಕಾಗಿದೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
15/01/2022 07:11 pm