ನವಲಗುಂದ : ವಾರಾಂತ್ಯ ಕರ್ಫ್ಯೂ ಭಾನುವಾರ ಸಹ ಮುಂದುವರೆದಿದ್ದು, ಇಂದು ಸಹ ಪಟ್ಟಣದಲ್ಲಿ ಜನರು ರಸ್ತೆಗೆ ಇಳಿಯದೇ, ಪಟ್ಟಣದ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ತುರ್ತು ಸೇವೆಗಳನ್ನು ಹೊರತು ಪಡಿಸಿ, ಎಲ್ಲವೂ ಸಂಪೂರ್ಣ ಸ್ತಬ್ದವಾಗಿತ್ತು.
ಇನ್ನು ಬೀದಿ ಬದಿ ವ್ಯಾಪಾರಸ್ತರ ವ್ಯಾಪಾರ ಚಟುವಟಿಕೆ ಸೇರಿದಂತೆ ದಿನಸಿ ವಸ್ತುಗಳ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಆದರೆ ಜನರಿಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಸಂಪೂರ್ಣ ಭಣಗುಡುತ್ತಿದ್ದವು. ಈ ಹಿನ್ನೆಲೆ ಇಂದು ಸಹ ಮುಂದುವರೆದ ವೀಕೆಂಡ್ ಕರ್ಫ್ಯೂ ಸಕ್ಸಸ್ ಆಗಿದೆ.
Kshetra Samachara
09/01/2022 01:06 pm