ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸ್ ವಾಹನ ಕಂಡು ಓಡೋಡಿ ಹೋದ ಯುವಕರ ಗುಂಪು

ಧಾರವಾಡ: ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಧಾರವಾಡದ ಹಲವು ಕಡೆಗಳಲ್ಲಿ ಯುವಕರು ಗುಂಪುಗಟ್ಟಿ ತಿರುಗಾಡುತ್ತಿದುದನ್ನು ಕಂಡ ಪೊಲೀಸರು ಅವರಿಗೆ ಬಿಸಿ ಮುಟ್ಟಿಸಿದ್ದಾರೆ.

ಧಾರವಾಡದ ಸಪ್ತಾಪುರ ಬಡಾವಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚರಿಸಿದ ಪೊಲೀಸರು ಅಲ್ಲಲ್ಲಿ ನಿಂತಿದ್ದ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಮನೆಗೆ ಹೋಗುವಂತೆ ಸೂಚನೆ ನೀಡಿದರು.

ಇನ್ನು ಸೈರನ್ ಹಾಕುತ್ತ ಬಂದ ಪೊಲೀಸರ ವಾಹನಗಳನ್ನು ಕಂಡ ಯುವಕರ ಗುಂಪು ಹೆದರಿ ಓಡೋಡಿ ಹೋದ ಪ್ರಸಂಗವೂ ಕಂಡು ಬಂತು. ಶನಿವಾರ ಸಂಜೆ ಹೊತ್ತಿಗೆ ಹೊರಗಡೆ ಬಂದ ಸಾರ್ವಜನಿಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ ಪೊಲೀಸರು. ಕರ್ಫ್ಯೂ ಅವಧಿಯಲ್ಲಿ ಹೊರಗಡೆ ಸುತ್ತಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Edited By : Shivu K
Kshetra Samachara

Kshetra Samachara

09/01/2022 10:08 am

Cinque Terre

57.55 K

Cinque Terre

4

ಸಂಬಂಧಿತ ಸುದ್ದಿ