ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾತ್ರಿಯಾಯ್ತು.. ಧಾರವಾಡ ಮಂದಿ ಮನೆ ಸೇರಿದ್ರು

ಧಾರವಾಡ: ಕೊರೊನಾ ವೈರಸ್‌ನ ರೂಪಾಂತರಿಯಾಗಿರುವ ಓಮಿಕ್ರಾನ್ ಸೋಂಕನ್ನು ಹತೋಟಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಎರಡನೇ ದಿನವಾದ ಇಂದು ಧಾರವಾಡದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.

ರಾತ್ರಿ 9 ಗಂಟೆಗೆ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನೂ ಬಂದ್ ಮಾಡಿ ಈ ಕರ್ಫ್ಯೂಗೆ ಬೆಂಬಲ ಸೂಚಿಸಲಾಗುತ್ತಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಧಾರವಾಡ ಬಿಕೋ ಎನ್ನುತ್ತಿದೆ.

ಧಾರವಾಡದ ಪ್ರಮುಖ ರಸ್ತೆಗಳು, ವೃತ್ತಗಳು ಜನ ಜಂಗುಳಿಯಿಂದ ಕೂಡಿರುತ್ತಿದ್ದವು. ಆದರೆ, ನಿನ್ನೆಯಿಂದ ಜಾರಿಯಾಗಿರುವ ಕರ್ಫ್ಯೂನಿಂದಾಗಿ ಆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ.

Edited By : Shivu K
Kshetra Samachara

Kshetra Samachara

29/12/2021 10:50 pm

Cinque Terre

36.38 K

Cinque Terre

3

ಸಂಬಂಧಿತ ಸುದ್ದಿ