ನವಲಗುಂದ : ಬುಧವಾರ ನವಲಗುಂದ ಪಟ್ಟಣದಲ್ಲಿ ವಿವಿಧ ಅಂಗಡಿ, ಹೋಟೆಲ್ ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇತರ ಸಾಮಗ್ರಿಗಳನ್ನು ಅಧಿಕಾರಿಗಳಿಂದ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗಿದೆ.
ಹೌದು ನವಲಗುಂದ ಪಟ್ಟಣದ ಮಾರುಕಟ್ಟೆ, ಬಸ್ ನಿಲ್ದಾಣ, ಜಿಯೋ ಮಾಲ್ ಸೇರಿದಂತೆ ಹಲವೆಡೆ ಎ.ಸಿ ಅಶೋಕ ತೆಲಿ, ತಹಶೀಲ್ದಾರ್ ನವೀನ ಹುಲ್ಲೂರ, ಪುರಸಭೆ ಮುಖ್ಯಾಧಿಕಾರಿಗಳಾದ ವೀರಪ್ಪ ಹಸಬಿ, ಪಿಎಸ್ಐ ಕಲ್ಮೇಶ ಬೆನ್ನೂರ ಅವರ ನೇತೃತ್ವದಲ್ಲಿ ದಾಳಿ ನಡೆಸಿ, 250 ಕೆಜಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
09/03/2022 05:49 pm