ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳೆ ವಿಮೆ ಪ್ರಿಮಿಯಂ ಹಣ ವರ್ಗಾಯಿಸದ ಬ್ಯಾಂಕಿಗೆ 50 ಸಾವಿರ ದಂಡ

ಧಾರವಾಡ: ರೈತರೊಬ್ಬರು ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಪಡೆಯಲು ಪಾವತಿಸಿದ್ದ ಪ್ರಿಮಿಯಂ ಹಣವನ್ನು ಅಗತ್ಯ ವಿವರಗಳೊಂದಿಗೆ ವಿಮಾ ಕಂಪೆನಿಗೆ ವರ್ಗಾಯಿಸದೇ ನಿರ್ಲಕ್ಷ್ಯ ತೋರಿದ ಕಲಘಟಗಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗೆ

ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಕಲಘಟಗಿ ತಾಲೂಕು ಯಲವಾಳ ಗ್ರಾಮದ ಕೃಷಿಕ ಬಸಪ್ಪ ಚೆನ್ನಪ್ಪ ಕಾಮಧೇನು ಎಂಬುವರು 2018-19ನೇ ಸಾಲಿನಲ್ಲಿ ತಮ್ಮ ಮಾವಿನ ಬೆಳೆಗೆ ವಿಮಾ ಸೌಲಭ್ಯ ಬಯಸಿ 3,399 ರೂಪಾಯಿ ಪ್ರಿಮಿಯಂನ್ನು ಕಲಘಟಗಿಯ ಬ್ಯಾಂಕ್ ಆಫ್ ಬರೋಡಾದಲ್ಲಿ ಪಾವತಿಸಿದ್ದರು. ಬ್ಯಾಂಕು ವಿಮಾ ಕಂಪೆನಿಗೆ ಹಣದೊಂದಿಗೆ ರೈತ‌ನ ವಿವರಗಳನ್ನು ಕಳುಹಿಸದೇ ನಿರ್ಲಕ್ಷ ಹಾಗೂ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆಯೋಗದಲ್ಲಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ಆಯೋಗವು ಕಲಘಟಗಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗೆ 40 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ಹಾಗೂ ಪ್ರಕರಣ ನ್ಯಾಯಾಲಯದ ಖರ್ಚಿಗೆ 10 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದೆ.ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2022 04:39 pm

Cinque Terre

50.19 K

Cinque Terre

7

ಸಂಬಂಧಿತ ಸುದ್ದಿ