ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಂಬಂಧ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಅವರು ಪ್ರತಿದಿನ ಉಪನಗರ ಠಾಣೆಗೆ ಪರೇಡ್ ನಡೆಸುವಂತಾಗಿದೆ.
ಪ್ರತಿದಿನ ಸಿಬಿಐ ಅಧಿಕಾರಿಗಳು ವಿಜಯ ಕುಲಕರ್ಣಿ ಅವರನ್ನು ಠಾಣೆ ಕರೆಯಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸಿಬಿಐ ಅಧಿಕಾರಿಗಳು ವಿಜಯ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಇವರ ಜೊತೆಗೆ ವಿನಯ್ ಡೇರಿ ನೋಡಿಕೊಳ್ಳುವ ನಟರಾಜ್ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಗುರುವಾರವೂ ಕೂಡ ವಿಜಯ ಕುಲಕರ್ಣಿ ಹಾಗೂ ನಟರಾಜ್ ಸಿಬಿಐ ವಿಚಾರಣೆಗೆ ಹಾಜರಾದರು.
Kshetra Samachara
17/12/2020 12:37 pm