ಹುಬ್ಬಳ್ಳಿ: ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ವಿರೋಧಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಬೆಳ್ಳಂಬೆಳಿಗ್ಗೆ ರಸ್ತೆಗೆ ಇಳಿದ ಪ್ರತಿಭಟನಾಕಾರರು ನಗರದ ವಿವಿಧ ಕಡೆಗಳಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಆರಂಭಗೊಂಡಿದ್ದು, ಹೊಸೂರು ಬಸ್ ಡಿಪೋ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ರೈತ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಹುಬ್ಬಳ್ಳಿ ಹೊಸೂರು ಬಸ್ ಡಿಪೋ ಎದುರು ರೈತರ ಪ್ರತಿಭಟನೆ ನಡೆಸುತ್ತಿದ್ದು,ಸಾರಿಗೆ ಬಸ್ ಗಳನ್ನು ತಡೆದು ಮತ್ತೆ ಬಸ್ ಗಳನ್ನ ಡಿಪೋ ಗೆ ಕಳುಹಿಸಿದ್ದಾರೆ. ರೈತರಿಗೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಸಾಥ್ ನೀಡಿದ್ದು, ವಾಣಿಜ್ಯನಗರಿಯಲ್ಲಿ ಭಾರತ ಬಂದ್ ಕಾವು ರಂಗೇರಿದೆ.
ಭಾರತ್ ಬಂದ್ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಸದ್ಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು,ಎಲ್ಲಾ ಬಸ್ ಗಳನ್ನು ಡಿಪೋ ಕಳುಹಿಸಿದ ಹಿನ್ನಲೆ.ಬಸ್ ಡಿಪೋ ಮುಂಭಾಗದಲ್ಲಿ ಚಾಲಕರು,ನಿರ್ವಾಹಕರು ಕಾಯುವಂತಾಯಿತು.ಬೆಳ್ಳಂ ಬೆಳಿಗ್ಗೆ ಮೊದಲ ಶಿಫ್ಟ್ ಕೆಲಸಕ್ಕೆ ಬಂದಿದ್ದ ಚಾಲಕರು,ನಿರ್ವಾಕರು ಬಸ್ ಗಳನ್ನ ಬಂದ್ ಮಾಡಿದ ಹಿನ್ನಲೆ ಬಸ್ ನಿಲ್ದಾಣದ ಎದುರು ನಿಂತುಕೊಂಡರು.
Kshetra Samachara
08/12/2020 08:48 am