ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾಲಿಗ್ರಫಿ ಟೆಸ್ಟ್ ಗೆ ಪರವಾನಿಗಿ ಕೇಳಿರೋ ಸಿಬಿಐ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಚಂದ್ರಶೇಖರ ಇಂಡಿ, ಸೋಮು ನ್ಯಾಮಗೌಡ ಅವರಿಗೆ ಪಾಲಿಗ್ರಫಿ (ಸುಳ್ಳು ಪತ್ತೆ ಪರೀಕ್ಷೆ) ಮಾಡಲು ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯದ ಪರವಾನಿಗಿ ಕೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಇಂದು ವಿಜಯ ಕುಲಕರ್ಣಿ, ಚಂದ್ರಶೇಖರ ಇಂಡಿ ಹಾಗೂ ಸೋಮು ನ್ಯಾಮಗೌಡ ಅವರು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.

ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಈಗಾಗಲೇ ಬಂಧಿತರಾಗಿದ್ದಾರೆ. ಇದೇ ಕೊಲೆ ವಿಚಾರವಾಗಿ ವಿಜಯ ಕುಲಕರ್ಣಿ, ಚಂದ್ರಶೇಖರ ಇಂಡಿ ಹಾಗೂ ಸೋಮು ನ್ಯಾಮಗೌಡ ಅವರನ್ನೂ ಸಿಬಿಐ ವಿಚಾರಣೆ ನಡೆಸುತ್ತಿದೆ. ಇವರು ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ಪಾಲಿಗ್ರಫಿ ಟೆಸ್ಟ್ ಮಾಡಲು ಪರವಾನಿಗಿ ನೀಡಬೇಕು ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇಂದು ನ್ಯಾಯಾಲಯಕ್ಕೆ ಹಾಜರಾದ ಈ ಮೂವರಿಗೂ ನ್ಯಾಯಾಲಯದ ಎದುರು ಕೊರೊನಾ ತಪಾಸಣೆ ನಡೆಸಲಾಯಿತು.

Edited By :
Kshetra Samachara

Kshetra Samachara

04/12/2020 07:08 pm

Cinque Terre

36.41 K

Cinque Terre

0

ಸಂಬಂಧಿತ ಸುದ್ದಿ