ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾವು ಆಡಿದ್ದು ಅಂದರ್ ಬಾಹರ್ ಅಲ್ಲ, ಪಾಯಿಂಟ್ ರಮ್ಮಿ ಎಂದ ಬಿಜೆಪಿ ಮುಖಂಡ

ಧಾರವಾಡ: ಧಾರವಾಡದ ರಮ್ಯಾ ರೆಸಿಡೆನ್ಸಿಯಲ್ಲಿ ನಿನ್ನೆ ತಡರಾತ್ರಿ ನಡೆದ ಇಸ್ಪೀಟ್ ರೇಡ್ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ರಮ್ಯಾ ರೆಸಿಡೆನ್ಸಿಯಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಡಿಸಿಪಿಯೂ ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ 49 ಲಕ್ಷ ನಗದು, 34 ವಾಹನ, ಮೊಬೈಲ್ ಸೇರಿದಂತೆ 56 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದರಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾತುಗಳುಕ ಕೇಳಿ ಬಂದಿದ್ದವು.

ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಗೆ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯನ್ನು ವಿಚಾರಣೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ತವನಪ್ಪ ಅಷ್ಟಗಿ, ರಮ್ಯಾ ರಿಕ್ರಿಯೇಶನ್ ಕ್ಲಬ್ ಅಧಿಕೃತ ಕ್ಲಬ್ ಆಗಿದ್ದು, ರಮ್ಮಿ ಆಡಲು ಪರವಾನಿಗೆ ಇದೆ. ಆದರೆ ಪೊಲೀಸರು ದುರುದ್ದೇಶದಿಂದ ಅಂದರಬಾಹರ ಜೂಜಿನ ಆರೋಪ ಹೊರಿಸಿದ್ದಾರೆ ಎಂದರು.

ಇನ್ನು ಧಾರವಾಡ ಗ್ರಾಮೀಣ ಠಾಣೆಗೆ ಭೇಟಿ ನೀಡಿದ್ದ ಬೆಳಗಾವಿ ಉತ್ತರವಲಯ ಐಜಿಪಿ ರಾಘವೇಂದ್ರ ಸುಹಾಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ 126 ಜನರನ್ನು ವಶಕ್ಕೆ ಪಡೆಯಲಾಗಿದ್ದು, 131 ಮೊಬೈಲ್ ಸೇರಿದಂತೆ 56 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಒಟ್ಟಾರೆ ಈ ಪ್ರಕರಣ ಇಸ್ಪೀಟ್ ನಿಂದ ರಮ್ಮಿಯಾಗಿ ತಿರುವು ಪಡೆದುಕೊಂಡಿದ್ದು, ಈ ಪ್ರಕರಣದಲ್ಲಿ ಇನ್ನೂ ದೊಡ್ಡ ದೊಡ್ಡ ರಾಜಕೀಯ ಕುಳಗಳು ಪಾಲ್ಗೊಂಡಿರುವ ಬಗ್ಗೆ ಗುಮಾನಿ ಇದೆ.

Edited By : Manjunath H D
Kshetra Samachara

Kshetra Samachara

15/11/2020 09:12 pm

Cinque Terre

78.05 K

Cinque Terre

7

ಸಂಬಂಧಿತ ಸುದ್ದಿ