ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಖಾಸಗಿ ವಾಹನಗಳು ಅಕ್ರಮ ಕ್ಯಾಬ್ ಗಳಾಗಿ ಪರಿವರ್ತನೆ! ಕೋಟ್ಯಾಂತರ ರೂ. ತೆರಿಗೆ ಗೋತಾ

ಹುಬ್ಬಳ್ಳಿ- ಮೋಟಾರ್ ಕ್ಯಾಬ್ ಚಲಾಯಿಸಲು ಒಬ್ಬರು ಪರವಾನಗಿ ಪಡೆಯಬೇಕು. ಇದಕ್ಕಾಗಿ ನಿಗದಿತ ಶುಲ್ಕವಿರುತ್ತದೆ. ನಿಯತಕಾಲಿಕವಾಗಿ ಪರವಾನಗಿ ನವೀಕರಣಕ್ಕೆ ಶುಲ್ಕವಿದೆ. ಆದ್ರೆ ಹಲವಾರು ಖಾಸಗಿ ವಾಹನ ಮಾಲೀಕರು ಪರವಾನಗಿ ಪಡೆಯದೆ ತಮ್ಮ ಖಾಸಗಿ ವಾಹನಗಳನ್ನು ಕ್ಯಾಬ್‌ಗಳಾಗಿ ಬಳಸಿಕೊಳ್ಳುತ್ತಾರೆ.....

ದೊಡ್ಡ ದೊಡ್ಡ ನಗರಗಳಲ್ಲಿ ಖಾಸಗಿ ವಾಹನಗಳನ್ನು, ಅನಧಿಕೃತ ಖಾಸಗಿ ಟ್ಯಾಕ್ಸಿಗಳಾಗಿ ಪರಿವರ್ತಿಸಿ ಬಾಡಿಗೆ ಆಧಾರದ ಮೇಲೆ ಸಾರ್ವಜನಿಕ ಸೇವೆ ಮಾಡುತ್ತಿವೆ.‌ ಇದರಿಂದ ರಾಜ್ಯ ಸರ್ಕಾರ ಬೊಕ್ಕಸಕ್ಕೆ ಹೊಡೆತ ಬಿಳಲಿದೆ.‌

ಬಿಳಿ ಬೋರ್ಡ್ ನ ವಾಹನಗಳನ್ನು ‌ಬಾಡಿಗೆಗೆ ಬಳಸಿಕೊಳ್ಳಬೇಕಾದ್ರೆ, ಅಂತವರು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯಬೇಕು. ‌ನಿಗದಿ ಶುಲ್ಕ ಭರಿಸಬೇಕು.

ಮಾಸಿಕ ತೆರಿಗೆ, ವಿಮೆ, ರಹದಾರಿ ಶುಲ್ಕ ತುಂಬಿ ಹಳದಿ ಬಣ್ಣದ ಬೋರ್ಡ್ ಆಗಿ ಪರಿವರ್ತನೆ ಮಾಡಿಕೊಂಡು ಬಾಡಿಗೆಗೆ ಬಳಸಬಹುದು. ಆದರೆ ಕೆಲವರು ತಮ್ಮ ಸ್ವಂತ ವಾಹನಗಳನ್ನು ಕ್ಯಾಬ್ ಆಗಿ ಪರಿವರ್ತನೆ ಮಾಡಿಕೊಂಡು ಬಾಡಿಗೆ ಸೇವೆ ಕಲ್ಪಿಸುತ್ತವೆ. ಇದು ಅಪರಾಧ. ಆದ್ರೆ ಇದಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಾಧ್ಯವಾಗಿಲ್ಲ.....

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಅವಶ್ಯವಾಗಿ ಎಂಬ ಅಭಿಪ್ರಾಯವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ‌. ಹಳದಿ ಬಣ್ಣದ ಬೋರ್ಡ್ ಇರುವ ವಾಹನಗಳ ಸೇವೆ ಪಡೆಯಬೇಕು.

ಒಂದು ವೇಳೆ ಯಾವುದಾದರೂ ಅವಘಡ ಸಂಭವಿಸಿದ್ರೆ ಬಿಳಿ ಬಣ್ಣದ ಬೋರ್ಡ್ ನಲ್ಲಿ ಸವಾರಿ ಮಾಡಿದವರಿಗೆ ಯಾವುದೇ ಪರಿಹಾರ ಇನ್ಶುರೆನ್ಸ್ ಸೌಲಭ್ಯ ಸಿಗುವುದಿಲ್ಲ. ಆದ್ರೆ ಇದಕ್ಕೆ ‌ಕಡಿವಾಣ ಹಾಕಲು ಸಾರಿಗೆ ಇಲಾಖೆ ಸಾಕಷ್ಟು ‌ಪ್ರಯತ್ನ ಮಾಡುತ್ತಿದೆ. ಆದರೆ ಜನರು ಇಂತ ಅನಧಿಕೃತ ವಾಹನ ಬಳಕೆ ಕಂಡು ಬಂದರೆ, ಸಾರಿಗೆ ಇಲಾಖೆ ಗಮನಕ್ಕೆ ತರಲು ಮನವಿ ಮಾಡಿದ್ದಾರೆ.....!

Edited By : Manjunath H D
Kshetra Samachara

Kshetra Samachara

12/11/2020 09:12 pm

Cinque Terre

47.89 K

Cinque Terre

5

ಸಂಬಂಧಿತ ಸುದ್ದಿ