ಹುಬ್ಬಳ್ಳಿ: ಗಣರಾಜ್ಯೋತ್ಸವದ ದಿನ ರೈತರು ಟ್ರ್ಯಾಕ್ಟರ್ ರ‍್ಯಾಲಿ ಆಯೋಜನೆ ಮಾಡಿದ್ದಾರೆ. ವಾಣಿಜ್ಯ ನಗರಿಯಲ್ಲಿಯೂ ಕೂಡ ಬೃಹತ್ ಮೆರವಣಿಗೆಗೆ ರೈತರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ರೈತರ ಜತೆ ನಿರ್ಧಾರ ಕೈಗೊಂಡಿವೆ.
ಈ ರ‍್ಯಾಲಿ ಹಿನ್ನೆಲೆ ರೈತ ಮುಖಂಡರೊಂದಿಗೆ ಹು-ಧಾ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು ಸಭೆ ನಡೆಸಿದರು. ರೈತರು ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಶಾಂತಯುತವಾಗಿ ರ‍್ಯಾಲಿ ನಡೆಸುವಂತೆ ಸೂಚನೆ ನೀಡಿದರು.
Kshetra Samachara
24/01/2021 04:31 pm