ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ಧನ ಬಳಿ ಹಣ ಕಿತ್ತುಕೊಳ್ಳಲು ಹೋಗಿ ಪೊಲೀಸರ ಅತಿಥಿಯಾದ ಯುವಕರು

ಧಾರವಾಡ: ವೃದ್ಧನೋರ್ವನನ್ನು ಆಟೊದಲ್ಲಿ ಕರೆದುಕೊಂಡು ಹೋಗಿ ಆತನ ಬಳಿ ಇದ್ದ ಹಣವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ ಇಬ್ಬರು ಯುವಕರನ್ನು ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದ ಅಶೋಕ ಚೌಹಾಣ ಎಂಬ ವೃದ್ಧನನ್ನು ಆಟೊದಲ್ಲಿ ಕರೆದುಕೊಂಡು ಹೊರಟಿದ್ದ ತಾಹೀರ್ ಸವಾರ ಮತ್ತು ಹಾಜಿಅಲಿ ಎಂಬ ಯುವಕರು ಆ ವೃದ್ಧನನ್ನು ಥಳಿಸಿ ಆತನ ಬಳಿ ಇದ್ದ ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರು ಆ ಇಬ್ಬರೂ ಯುವಕರನ್ನು ವಿಚಾರಣೆ ಮಾಡಿದಾಗ ಸತ್ಯ ಸಂಗತಿ ಬಯಲಾಗಿದೆ. ನಂತರ ಸ್ಥಳೀಯರೇ ಆ ಯುವಕರನ್ನು ಥಳಿಸಿ ಉಪನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ

Edited By :
Kshetra Samachara

Kshetra Samachara

19/10/2020 07:33 pm

Cinque Terre

10.31 K

Cinque Terre

1

ಸಂಬಂಧಿತ ಸುದ್ದಿ