ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಸರಾ, ದೀಪಾವಳಿ ಪ್ರಯುಕ್ತ ವಿಶೇಷ ರೈಲ್ವೆ ಸಂಚಾರ: ಎಸ್.ಡಬ್ಲ್ಯೂ.ಆರ್ ನಿರ್ಧಾರ

ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ವಿಜಯವಾಡ–ಹುಬ್ಬಳ್ಳಿ–ವಿಜಯವಾಡ ನಡುವೆ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದ್ದು,ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ.

ರೈಲು ಸಂಖ್ಯೆ 07225 ವಿಜಯವಾಡ–ಹುಬ್ಬಳ್ಳಿ ರೈಲು ಅ.20 ರಿಂದ ನ.29ರವರೆಗೆ ನಿತ್ಯ ರಾತ್ರಿ 7.45 ವಿಜಯವಾಡದಿಂದ ಹೊರಡಲಿದ್ದು, ಮರು ದಿನ ಬೆಳಿಗ್ಗೆ 11.25ಕ್ಕೆ ಹುಬ್ಬಳ್ಳಿ ತಲುಪಲಿದೆ.

ರೈಲು ಸಂಖ್ಯೆ 07226 ಹುಬ್ಬಳ್ಳಿ ವಿಜಯವಾಡ ರೈಲು ಅ.21 ರಿಂದ ನ.30ರವರೆಗೆ ನಿತ್ಯ ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮರು ದಿನ ಬೆಳಿಗ್ಗೆ 5.15ಕ್ಕೆ ವಿಜಯವಾಡ ತಲುಪಲಿದೆ.

ಗುಂಟೂರ, ನರಸರಾವ್‌ಪೇಟ, ನಂದ್ಯಾಲ, ಗುಂಟಕಲ್‌, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಅಣ್ಣಿಗೇರಿ ಮಾರ್ಗವಾಗಿ ಸಂಚರಿಸಲಿದೆ. ಸೀಟು ಕಾಯ್ದಿರಿಸಿದವರು ಮಾತ್ರ ಸಂಚಾರ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Edited By :
Kshetra Samachara

Kshetra Samachara

16/10/2020 09:54 am

Cinque Terre

37.79 K

Cinque Terre

4

ಸಂಬಂಧಿತ ಸುದ್ದಿ