ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡ ಕೌಶಲ್ಯ 2022: ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದ ಟೈ ಹುಬ್ಬಳ್ಳಿ ಪ್ರದರ್ಶನ ಸಕ್ಸಸ್

ಹುಬ್ಬಳ್ಳಿ: ಮಹಿಳೆಯರನ್ನು ಅಭಿವೃದ್ಧಿ ಮಾಡುವ ಮೂಲಕ ದೇಶದ ಆರ್ಥಿಕತೆ ಅಭಿವೃದ್ಧಿಗೆ ಒತ್ತನ್ನು ನೀಡುವ ಮಹತ್ವದ ಕನಸನ್ನು ಕಂಡಿರುವ ಟೈ ಹುಬ್ಬಳ್ಳಿಯ ಕೌಶಲ್ಯ-2022 ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದೆ.

ಹೌದು.. ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಭಾಗಿತ್ವದಲ್ಲಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದ ಟೈ ಹುಬ್ಬಳ್ಳಿಯು ಮಹಿಳೆಯರ ಕನಸನ್ನು ಸಾಕಾರಗೊಳಿಸಲು ಮುಂದಾಗಿದ್ದು ಈಗ ಜಯ ಕಂಡಿದೆ. ಶ್ರಾವಣಿ ಪವಾರ, ಶಿಲ್ಪಾ ಶೆಟ್ಟಿ, ಶೃತಿ ಹೆಬಸೂರ ಹಾಗೂ ಟೈ ಹುಬ್ಬಳ್ಳಿಯ ಇನ್ನಿತರ ಸದಸ್ಯರ ಶ್ರಮಕ್ಕೆ ಫಲ ದೊರೆತಂತಾಗಿದೆ. ಹಾಗಿದ್ದರೇ ಹೇಗಿದೆ ಬೃಹತ್ ಪ್ರದರ್ಶನದ ಝಲಕ್ ನೋಡಿಕೊಂಡು ಬರೋಣ ಬನ್ನಿ..

ಟೈ-ಹುಬ್ಬಳ್ಳಿ ಈಗ ಮಹಿಳಾ ಸಬಲೀಕರಣ ಕನಸನ್ನು ಹೊತ್ತು ಮುನ್ನಡೆಯಲು ಚಿಂತನೆ ನಡೆಸಿರುವ ಟೈ-ಹುಬ್ಬಳ್ಳಿಯ ಅಭಿಯಾನಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಕೂಡ ಕೈ ಜೋಡಿಸಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಟೈ ಹುಬ್ಬಳ್ಳಿಯ ವತಿಯಿಂದ ಕೌಶಲ್ಯ-2022 ಬೃಹತ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ನೂರಾರು ಬಗೆಯ ಕಲಾಕೃತಿಗಳು, ರುಚಿಯಾದ ಖಾದ್ಯಗಳು, ಕರಕುಶಲ ಹಾಗೂ ಗೃಹ ಬಳಕೆಯ ವಸ್ತುಗಳು ಮಹಿಳೆಯರ ಕಲೆಯ ಅಭಿರುಚಿಯನ್ನು ಪ್ರಸ್ತುತ ಪಡಿಸಲು ಸಾಕ್ಷಿಯಾದವು. ಎರಡನೇ ದಿನವಾದ ಇಂದು ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳು ಆಗಮಿಸಿದ್ದು, ಬೃಹತ್ ಪ್ರದರ್ಶನ ಉತ್ತಮ ರೀತಿಯಲ್ಲಿ ಪೂರ್ಣಗೊಂಡಿದೆ.

ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಭಾಗಿತ್ವದಲ್ಲಿ ಇಂತಹದೊಂದು ಮಹತ್ವದ ಕಾರ್ಯಕ್ಕೆ ಜಯಸಿಕ್ಕಿದ್ದು, ವಿಶೇಷವಾಗಿದೆ. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸಿರುವ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಕಾರ್ಯಕ್ಕೆ ಮಹಿಳಾ ಉದ್ಯಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Edited By : Somashekar
Kshetra Samachara

Kshetra Samachara

18/09/2022 02:44 pm

Cinque Terre

24.83 K

Cinque Terre

2

ಸಂಬಂಧಿತ ಸುದ್ದಿ