ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ದೇಶಪಾಂಡೆ ಫೆಲೋಶಿಪ್, ಪದವೀಧರರ ಸಾಧನೆಯ ಮಹಾಪೂರ

ಹುಬ್ಬಳ್ಳಿ : ಒಂದು ಫೆಲೋಶಿಪ್, ನಾಲ್ಕು ತಿಂಗಳ ತರಬೇತಿ, ಯಾವುದೇ ಪದವೀಧರರಿಗೆ ಕೌಶಲ್ಯದ ಜೊತೆ ಸ್ವಂತ ಉದ್ಯೋಗ, ಕಾರ್ಪೊರೇಟ್ ಕಂಪನಿ ಉದ್ಯೋಗಿಯಾಗುವ ಸುವರ್ಣಾವಕಾಶ.

ಎಸ್‌ ! ಇಂತಹದ್ದೊಂದು ತರಬೇತಿ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ನೇತೃತ್ವದಲ್ಲಿ ಆರಂಭವಾಗಿ ಒಂದಲ್ಲಾ ಎರಡಲ್ಲ ಸಾವಿರಕ್ಕೂ ಅಧಿಕ ಪದವೀಧರರ ಭವಿಷ್ಯದಲ್ಲಿ ಬದಲಾವಣೆ ತಂದು ಈಗಾಗಲೇ ಉದ್ಯೋಗ ಕಲ್ಪಿಸಿಕೊಟ್ಟಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಬಿಎ, ಬಿ.ಕಾಮ್, ಬಿ.ಎಸ್ಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಬಿಸಿಎ, ಎಂಬಿಎ ಮುಗಿಸಿದ ಪದವೀಧರರಿಗೆ ನಾಲ್ಕೇ ತಿಂಗಳ ಸ್ಮಾರ್ಟ್ ಕ್ಲಾಸ್, ನುರಿತ ಶಿಕ್ಷಕರ ತರಬೇತಿ ಆತ್ಮಸ್ಥೈರ್ಯ, ಮಹತ್ವಾಕಾಂಕ್ಷೆ, ಹೆದರದೇ ಮುನ್ನುಗ್ಗಬಲ್ಲ ಛಲ, ಎಲ್ಲಕ್ಕಿಂತ ಮಿಗಿಲಾಗಿ ಸುಲಲಿತ ಆಂಗ್ಲ ಭಾಷೆಯ ಜ್ಞಾನ ನೀಡಿ ಎಲ್ಲ ವೇದಿಕೆ ಪ್ರತಿನಿಧಿಸಬಲ್ಲ ಧೈರ್ಯ ನೀಡಿದೆ.

ಅದರಂತೆ ಕೌಟಿಲ್ಯ, ಸುಸುಂಧಿ ತರಬೇತಿ ಪಡೆದ ಪದವೀಧರರ ಅಭಿಪ್ರಾಯ ತರಬೇತಿ ಗುಣಮಟ್ಟ ಹೇಗಿದೆ ಕೇಳಿ.‌

ಮುಖ್ಯವಾಗಿ ಈಗಾಗಲೇ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್'ನಲ್ಲಿ ತರಬೇತಿ ಪೂರ್ಣ ಮಾಡಿದ ಪದವೀಧರರಿಗೆ ಪ್ಲೇಸ್ ಮೆಂಟ್ ಖಚಿತವಾಗಿದ್ದು, ಇಲ್ಲೊಬ್ಬ ಫೆಲೋಶಿಪ್ ಪದವೀಧರೆ ಇದೀಗ ಕ್ಯಾಬ್ ಜೆಮಿನಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದಾಳೆ.

ಪ್ರತಿಯೊಂದು ಪದವೀಧರರಿಗೆ ಸೂಕ್ತ ತರಬೇತಿ ನೀಡಬಲ್ಲ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ಈಗಾಗಲೇ ರಾಜ್ಯಾದ್ಯಂತ ಯುವಕ ಯುವತಿಯರಿಗೆ ವಸತಿ ಜೊತೆ ಗ್ರಂಥಾಲಯ, ಯೋಗ, ಧ್ಯಾನ, ಕ್ರೀಡೆ, ಆಟೋಟದ ಶಿಕ್ಷಣ ನೀಡುತ್ತಾ ಹಳ್ಳಿ, ನಗರದ ಪದವೀಧರರಿಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟು ಅಧ್ಯಯನಕ್ಕೆ ಸ್ವಾಗತ ಕೋರುತ್ತಿದೆ.

ಈಗಾಗಲೇ ಯಾವುದೇ ಪದವಿ ಪೂರೈಸಿದ ಯುವಕ ಯುವತಿಯರೇ ನಿಮ್ಮಿಷ್ಟದ ಕಾರ್ಪೊರೇಟ್, ಸಾಫ್ಟ್ ವೇರ್ ಉದ್ಯೋಗ ಅಥವಾ ಸ್ವಂತ ಉದ್ಯೋಗ ಕೈಗೊಳ್ಳಲು ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ಗೆ ಭೇಟಿ ಕೊಡಿ ನಿಮ್ಮ ಕನಸಿನ ಬಾಗಿಲು ಕೀಲಿ ತೆರೆಯಿರಿ.

ಮತ್ಯಾಕೆ ತಡಾ ! ಇಂದೇ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ಗೆ ಭೇಟಿ ನೀಡಿ, ಪರಿಸರ ನೋಡಿ ಆಲೋಚಿಸಿ, ತರಬೇತಿ ಪಡೆಯಿರಿ.

Edited By : Nagesh Gaonkar
Kshetra Samachara

Kshetra Samachara

30/05/2022 07:08 pm

Cinque Terre

92.53 K

Cinque Terre

0

ಸಂಬಂಧಿತ ಸುದ್ದಿ