ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ಕಿ ಹರಿದ ರಾಜ ಕಾಲುವೆ : ಅಸ್ತವ್ಯಸ್ತಗೊಂಡ ಗೌಸಿಯಾ ನಗರದ ಜನ ಜೀವನ

ಹುಬ್ಬಳ್ಳಿ : ಇಂದು ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ವಾಣಿಜ್ಯ ನಗರಿ ಜನರು ಬೆಚ್ಚಿ ಬಿದ್ದಿದ್ದಾರೆ. ಒಂದು ಕಡೆ ರಭಸದಿಂದ ಸುರಿಯುತ್ತಿರುವ ಮಳೆಯಿಂದ ರಾಜ ಕಾಲುವೆ, ಚರಂಡಿ ತುಂಬಿ ಕೊಳಕು ನೀರು ಮನೆ ಒಳಗೆ ನುಗ್ಗುತ್ತಿದೆ.

ಹೌದು ವಾರ್ಡ್ ನಂಬರ 77 ರಲ್ಲಿ ಬರುವ ಗೌಸಿಯಾನಗರದ ಪಕ್ಕದಲ್ಲಿ ರಾಜ ಕಾಲುವೆ ಇದೆ. ನಿರಂತರ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದ, ರಾಜ ಕಾಲುವೆ ತುಂಬಿ ನೀರೆಲ್ಲ ಏರಿಗಳಲ್ಲಿ ನುಗ್ಗುತ್ತಿದ್ದು ಜಲಪ್ರಳಯವಾಗಿದೆ.

ಗೌಸಿಯಾನಗರದಲ್ಲಿ ರಸ್ತೆಯೇ ಕೆರೆಯಂತಾಗಿವೆ. ಅಷ್ಟೇ ಅಲ್ಲದೇ ಮನೆ ಮನೆಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ. ಅಲ್ಲಿನ ನಿವಾಸಿಗಳು ಹೊರಗೆ ಸಹ ಬರಲು ಆಗುತ್ತಿಲ್ಲ. ಮನೆ ಮುಂದೆ ನಿಲ್ಲಿಸಿದ ವಾಹನಗಳು ಸಹ ಮುಳುಗಿವೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

Edited By : Somashekar
Kshetra Samachara

Kshetra Samachara

11/10/2022 11:40 am

Cinque Terre

22.35 K

Cinque Terre

1

ಸಂಬಂಧಿತ ಸುದ್ದಿ