ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಇದು ಜನಪ್ರತಿನಿಧಿಗಳ ತವರೂರು ಸಮಸ್ಯೆಗಳು ನೂರಾರು !

ಕುಂದಗೋಳ : ಅದೊಂದು ದಿವಂಗತ ಮಾಜಿ ಸಚಿವರು ಹಾಲಿ ಶಾಸಕರು ಮಾಜಿ ಎಂಎಲ್ಎ ಹಾಗೂ ಪ್ರಭಾವಿ ಎಂಎಲ್ಎ ಅಭ್ಯರ್ಥಿಗಳ ಊರು ಆ ಊರಿನ ರಸ್ತೆ ಪರಿಸ್ಥಿತಿ ನೋಡಿದ್ರೇ ಸ್ವತಃ ಅಲ್ಲಿನ ಗ್ರಾಮಸ್ಥರೇ ವ್ಯವಸ್ಥೆಗೆ ಛೀಮಾರಿ ಹಾಕ್ತಾ ಇದ್ದಾರೆ.

ಎಸ್.! ಇದ್ಯಾವ ಊರು ಅಂದ್ರಾ ? ಇದೇ ಸ್ವಾಮಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ. ಈ ಗ್ರಾಮದ ಮೃತ್ಯುಂಜಯ ನಗರಕ್ಕೆ ನೀವೂ ಹೋದ್ರೆ ನೀವೂ ಮೃತ್ಯು ಕೂಪಕ್ಕೆ ಸಿಲುಕಿದಂತೆ ಸರಿ ಅಷ್ಟೋಂದು ಅವ್ಯವಸ್ಥೆ ರಾಡಿ, ಕೊಳಚೆ ಈ ಓಣಿಯಲ್ಲಿದೆ.

ಕಳೆದ ಹಲವಾರು ವರ್ಷಗಳಿಂದ ಇದೇ ಅವ್ಯವಸ್ಥೆ ನಡುವೆ ಜೀವನ ಸಾಗಿಸುವ ಇಲ್ಲಿನ ನಿವಾಸಿಗಳಿಗೆ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಇಂದಿಗೂ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸದೆ ಗಪ್ ಚುಪ್ ಪಗಾರ ಪಡೀತಾ ಇದ್ದಾರೆ.

ಈ ಕಾರಣ ನಿತ್ಯ ವಯೋವೃದ್ಧರು, ರೋಗಿಗಳು, ಶಾಲಾ ಮಕ್ಕಳು ಈ ಕೊಳಚೆಯಲ್ಲೇ ರಾಡಿಯ ಪರಿಸ್ಥಿತಿಯಲ್ಲೇ ಓಡಾಡುವ ಸ್ಥಿತಿ ಹೇಳತಿರದು.

ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ತಾಲೂಕು ಪಂಚಾಯಿತಿ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಗಮನಿಸಿ ಇದರಂತೆ ಎಲ್ಲಾ ಗ್ರಾಮಗಳ ಅವ್ಯವಸ್ಥೆ ಸುಧಾರಣೆ ಮಾಡಬೇಕಿದೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

20/07/2022 03:59 pm

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ