ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಕುಂದಗೋಳ ಪಟ್ಟಣದ ಮಸಾರಿ ಪ್ಲಾಟ್ ಬಳಿ ನಡೆಯುತ್ತಿರುವ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಮುಗಿಯದ ಕಾರಣ ವಾಹನ ಸವಾರರು, ಈ ರಾಡಿ ತುಂಬಿದ ಅಪಾಯದ ರಸ್ತೆಯಲ್ಲಿ ಜೀವ ಅಂಗೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿಗೆ ಉತ್ತರವೇ ಸಿಗದಾಗಿದೆ.
ಹೌದು ! ಕಳೆದ ಎರಡು ವರ್ಷಗಳಿಂದ ಕುಂದಗೋಳ ಮಸಾರಿ ಪ್ಲಾಟ್ ಬಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ, ಇಂದಿಗೂ ಕಾಮಗಾರಿ ಮುಗಿಯುವ ಸ್ಪಷ್ಟತೆಯನ್ನ ರೈಲ್ವೆ ಅಧಿಕಾರಿಗಳು ನೀಡುತ್ತಿಲ್ಲಾ.
ಹೀಗಾಗಿ ಅವ್ಯವಸ್ಥೆ ರಾಡಿ, ಕೆಸರು, ತಗ್ಗು, ಗುಂಡಿಗಳೇ ರಾರಾಜಿಸುವ ಈ ಹರಳೆಣ್ಣೆ ಸುರಿದಂತಹ ಕೆಂಪು ರಸ್ತೆಯೇ ವಾಹನ ಸವಾರರಿಗೆ ಖಾಯಂ ಆಗಿದ್ದು, ಇಲ್ಲಿ ಸಂಭವಿಸುವ ಅಪಘಾತ ನಿತ್ಯ ರಾಡಿಯಲ್ಲಿ ಬಿದ್ದು ಎದ್ದು ಹೋಗುವವರ ಸಂಖ್ಯೆ ಲೆಕ್ಕಕ್ಕಿಲ್ಲದಂತ್ತಾಗಿದೆ.
ಇನ್ನು ಗುಡೇನಕಟ್ಟಿ, ಬೆನಕನಹಳ್ಳಿ, ಹಿರೆನೇರ್ತಿ, ಚಿಕ್ಕನೇರ್ತಿ, ಯರಗುಪ್ಪಿ, ಮುಳ್ಳೊಳ್ಳಿ, ಯರಿನಾರಾಯಣಪೂರ, ಜನತೆ ಇಂತಹ ದುರಾವಸ್ಥೆಯಲ್ಲೇ ನಿತ್ಯ ತಾಲೂಕು ಕೇಂದ್ರ ಕುಂದಗೋಳ ಹಾಗೂ ಇತರೆ ಹಳ್ಳಿಗಳಿಗೆ ಸಂಚರಿಸುತ್ತಾ ಬ್ರಿಡ್ಜ್ ಕಾಮಗಾರಿ ಮುಗಿಯುವ ದಿನ ಎದುರು ನೋಡುತ್ತಾ ಇದ್ದಾರೆ.
Kshetra Samachara
21/05/2022 06:01 pm