ಕುಂದಗೋಳ :ತಾಲೂಕಿನ ಹಿರೇಬೂದಿಹಾಳ ಗ್ರಾಮದ ಶ್ರೀ ಉಡಚಮ್ಮದೇವಿ ದೇವಸ್ಥಾನದ ಕಟ್ಟಡ ಉದ್ಘಾಟನೆ ಶ್ರೀ ಉಡಚಮ್ಮದೇವಿ ಹಾಗೂ ವಿವಿಧ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ಮೇ.8 ರಿಂದ ಮೇ.12ರ ವರೆಗೆ ವಿಜೃಂಭಣೆಯಿಂದ ಜರುಗಲಿವೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಸಿದ್ದಪ್ಪ ಕಟ್ಟಿಮನಿ ಹೇಳಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಇದೇ ರವಿವಾರ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಶ್ರೀ ಸಿದ್ದಲಿಂಗಯ್ಯ ಸ್ವಾಮಿ ನಿ. ಹಿರೇಮಠ ಹಾಗೂ ಶ್ರೀ ವೆ.ಮೂ.ಅಡವಯ್ಯಸ್ವಾಮಿ ಶಿ. ಅಡವಯ್ಯನವರ ಮಠ ಇವರಿಂದ ಜರುಗುವುದು.
ಸೋಮವಾರ ಮತ್ತು 10 ರಂದು ಮಂಗಳವಾರ ಶ್ರೀದೇವಿಗೆ ಜಲವಾಸ, ಧನ್ಯವಾದ,ವಸ್ತ್ರ ವಾಸ, ಶ್ರೇಯಾದಿವಾಸ, ಪುಷ್ಪದಿವಾಸ ವಿವಿಧ ಪೂಜಾ ಕಾರ್ಯಕ್ರಮ ಮೇ 11ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಣಪತಿ ಪೂಜೆ, ಗಂಗಾಪೂಜೆ, ಉಮಾಮಹೇಶ್ವರ ಪೂಜೆ, ದಳವಸ್ತ್ರ, ದುರ್ಗಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಕಾರ್ಯಕ್ರಮ ಮೇ 12 ಗುರುವಾರ ಬೆಳಗಾವಿ ಶ್ರೀ ಕ್ಷೇತ್ರ ಪಂಚಗ್ರಾಮ ಮುಕ್ತಿ ಮಠದ ಶ್ರೀ ಶ್ರೀ ಧರ್ಮಶ್ರೀ ತಪೋ ರತ್ನ ಪಂ.ಬ್ರ. ಶಿವ ಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತಹಸ್ತದಿಂದ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಉಡಚಮ್ಮದೇವಿ ಹಾಗೂ ಇತರೆ ದೇವತಾ ಮೂರ್ತಿಗಳಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಶ್ರೀದೇವಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ, ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಹಾಗೂ ಕಳಸಾರೋಹ ಕಾರ್ಯಕ್ರಮ ಜರುಗುವುದು ಎಂದರು.
ದಿನಾಂಕ 9, 10 ,11, ರಂದು ಸಾಯಂಕಾಲ 6 ರಿಂದ 8 ರವರೆಗೆ ಧರ್ಮಸಭೆಯಲ್ಲಿ ಕುಂದಗೋಳ ಕಲ್ಯಾಣಪುರ ಮಠದ ಶ್ರೀ ತ್ರಿವಿಧ ದಾಸೋಹಿ ಪಂ.ಪೂ. ಬಸವಣ್ಣಜ್ಜನವರು ಹಾಗೂ ಯರನಾಳದ ಶ್ರೀ ಬಾಲ ಶಿವಯೋಗಿ ಶಿವಪ್ರಸಾದ ದೇವರು ಹಿರೇಮಠ ಇವರ ಸಾನ್ನಿಧ್ಯದಲ್ಲಿ ಭಕ್ತಿ ಸೇವೆ ಸಲ್ಲಿಸಿದ ಸದ್ಭಕ್ತಾಧಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರುಗುವುದು. ಮೇ 12 ರಾತ್ರಿ 8 ಗಂಟೆಗೆ ವಿಶೇಷ ಆಮಂತ್ರಿತರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು.
ದಿ.9, 10 ರಂದು ರಾತ್ರಿ 10 ಘಂಟೆಗೆ ಹರ್ಲಾಪುರ ಮೆಹಬೂಬ್ ಸಾಬ್ ನದಾಫ್ ಸರಿಗಮಪ ತಂಡದಿಂದ ರಸಮಂಜರಿ ಕಾರ್ಯಕ್ರಮ. ದಿ12 ರಂದು ರಾತ್ರಿ 10 ಘಂಟೆಗೆ ಹುಬ್ಬಳ್ಳಿಯ ರಾಯಲ್ ಲೈವ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ದಿ-13 ರಂದು ಸ್ತ್ರೀ ಶಕ್ತಿ ಸಂಘದವರು ಹಾಗೂ ಮಹಿಳಾ ಸ್ವಸಹಾಯ ಸಂಘದವರ ನೇತೃತ್ವದಲ್ಲಿ ಮುತ್ತೈದೆಯರ 1008 ಉಡಿತುಂಬುವ ಕಾರ್ಯಕ್ರಮ ಜರಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ಯಲಿವಾಳ, ಜಯಪ್ಪ ಸೋಮಣ್ಣವರ್, ಅಂದಾನೆಪ್ಪ ಕಾಳಾರಿ, ಈಶ್ವರ್ ಬೆಂತೂರು, ಹನಿಪ್ಪ ಬನ್ನೂರ, ಶಿವಾನಂದ ಮಡ್ಲಿ ಮತ್ತು ಪ್ರಭಾಕರ್ ಕುರುವಿನಶೆಟ್ಟಿ ಇದ್ದರು.
Kshetra Samachara
07/05/2022 11:57 am