ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲಾಧಿಕಾರಿ ನಿವಾಸಕ್ಕೆ ಬಂತು ವಿಶೇಷ ಅತಿಥಿ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಸರ್ಕಾರಿ ನಿವಾಸಕ್ಕೆ ಮಂಗಳವಾರ ಬೆಳ್ಳಂಬೆಳಿಗ್ಗೆ ವಿಶೇಷ ಅತಿಥಿಯೊಂದು ಬಂದಿತ್ತು. ಹೌದು! ಜಿಲ್ಲಾಧಿಕಾರಿ ನಿವಾಸದ ಮುಖ್ಯ ಗೇಟ್ ಬಳಿ ಬೃಹತ್ ಕೆರೆ ಹಾವು ಬಂದಿತ್ತು. ಇದನ್ನು ಕಂಡ ಸಿಬ್ಬಂದಿ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದ ಯಲ್ಲಪ್ಪ ಜೋಡಳ್ಳಿ ಸುಮಾರು 9 ಅಡಿ ಉದ್ದದ ಕೆರೆ ಹಾವನ್ನು ಯಲ್ಲಪ್ಪ ಅವರು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Edited By : Somashekar
Kshetra Samachara

Kshetra Samachara

10/12/2024 04:53 pm

Cinque Terre

12.91 K

Cinque Terre

1

ಸಂಬಂಧಿತ ಸುದ್ದಿ