ಹುಬ್ಬಳ್ಳಿ: ಸುಮಾರು ತಿಂಗಳುಗಳಿಂದ ಹುಬ್ಬಳ್ಳಿಯ ಕುಸಗಲ್ ರಸ್ತೆಯಲ್ಲಿರುವ ಸರಸ್ವತಿ ಪುರಂನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಗಳು ಹೊರಗೆ ಬರಲು ಭಯ ಪಡುತ್ತಿದ್ದಾರೆ.
ಹೌದು,,, ಸುಮಾರು ಮೂರ್ನಾಲ್ಕು ತಿಂಗಳಿಂದ ಈ ಸರಸ್ವತಿ ಪುರಂನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವಯಸ್ಸಾದವರು, ಚಿಕ್ಕ ಮಕ್ಕಳು ಹೊರಗೆ ಬಂದ್ರೆ ಸಾಕು ಅಟ್ಯಾಕ್ ಮಾಡುತ್ತಿವೆ. ಈಗಾಗಲೇ ಅದೆಷ್ಟೋ ಜನರಿಗೆ ನಾಯಿಗಳು ಕಚ್ಚಿವೆ. ಈ ಬಗ್ಗೆ ಪಾಲಿಕೆಗೆ ತಿಳಿಸಿದ್ರೂ ಏನು ಪ್ರಯೋಜನವಾಗುತ್ತಿಲ್ಲವಂತೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ, ಸಾಯಂಕಾಲ ಆದ್ರೆ ಸಾಕಷ್ಟು ಬೀದಿ ನಾಯಿಗಳು ಒಂದೆಡೆ ಸೇರಿ ಜನರಲ್ಲಿ ಭಯ ಹುಟ್ಟಿಸುತ್ತಿವೆ. ಸರಸ್ವತಿ ಪುರಂನಲ್ಲಿ ಕೆಲವು ತಿಂಗಳುಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಇದಕ್ಕೆ ಪಾಲಿಕೆ ಅಧಿಕಾರಿಗಳು ಕಡಿವಾಣ ಹಾಕಿ ಜನರಿಗೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ.
Kshetra Samachara
10/12/2024 04:31 pm