ಹುಬ್ಬಳ್ಳಿ: ಮೊದಲೇ ಬಿಸಿಲು ನೆತ್ತಿಯ ಮೇಲೆ ಧಗ ಧಗ ಕುದಿಯುತ್ತಿದೆ. ಸಾಯಂಕಾಲ ವೇಳೆ ಮಳೆಯ ಆರ್ಭಟ. ಇವೆಲ್ಲದರ ನಡುವೆ ಜನರು ತಮ್ಮ ಜೀವನವನ್ನು ಸಾಗಿಸಬೇಕು. ನಮ್ಮ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಆಗುತ್ತಿದೆ ನಿಜಾ. ಆದರೆ ಇದ್ದ ಬಸ್ ನಿಲ್ದಾಣವನ್ನು ತೆರವು ಮಾಡಿ ಈಗ ಜನರನ್ನು ನಡು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ....
ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಂದ್ರ ಭಾಗವಾದ ಕಾರ್ಪೊರೇಷನ್ ಬಸ್ ನಿಲ್ದಾಣವನ್ನು ಕಳೆದ ಎರಡು ವರ್ಷಗಳ ಹಿಂದೆಯೇ ತೆರವುಗೊಳಿಸಿದ್ದರು. ಆದರೆ ಇದುವರೆಗೂ ಬಸ್ ನಿಲ್ದಾಣ ಮಾಡದೆ ಜನಸಾಮಾನ್ಯರನ್ನು ಬೀದಿಗೆ ಎಳೆದಂತಾಗಿದೆ. ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಬಸ್ ನಿಲ್ದಾಣಕ್ಕೆ ವಯೋವೃದ್ಧರು ಬರುತ್ತಾರೆ. ಆದರೆ ಅವರೆಲ್ಲ ಎಲ್ಲಿ ಕೂರಬೇಕು ಎಂಬುದು ತಿಳಿಯದಂತಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ...
ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಮರಳಿ ಹೊಸ ಆವಿಷ್ಕಾರ ಹೊಂದುವಂತಹ ಬಸ್ ನಿಲ್ದಾಣ ಮಾಡಿ ಕೊಡಲಾಗುತ್ತದೆಂದು ಇದ್ದ ಬಸ್ ನಿಲ್ದಾಣ ತೆರವು ಮಾಡಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಬಸ್ ನಿಲ್ದಾಣವನ್ನು ಮಾಡಿಕೊಡಬೇಕಾಗಿದೆ.....
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
31/03/2022 10:45 am